VIDEO: ರೀಲ್ಸ್​ ಮಾಡುವವರೇ ಹುಷಾರ್​! ಇನ್​ಸ್ಟಾ ಮೇಲೆ ಖಾಕಿ​ ಕಣ್ಣು: ಬೆಂಗಳೂರಿನ ಟಿಕ್​ಟಾಕ್​ ಸ್ಟಾರ್​ಗೆ ಬಿತ್ತು ಭಾರಿ ದಂಡ

dhanu
Published on

ಬೆಂಗಳೂರು: ಈಗಿನ ಯುವಕ- ಯುವತಿಯರಿಗೆ ರೀಲ್ಸ್​ ಮೇಲೆ ಅದೇನೋ ವ್ಯಾಮೋಹ. ರಾತ್ರೋರಾತ್ರಿ ಸ್ಟಾರ್​ ಆದವರೂ ಇದ್ದಾರೆ. ಹೆಚ್ಚೆಚ್ಚು ವ್ಯೂಸ್​, ಲೈಕ್ಸ್​ ಪಡೆಯಲು ಯುವಜನರು ಮುಗಿಬೀಳುತ್ತಿದ್ದಾರೆ. ಎಲ್ಲಾ ಸರಿ. ರೀಲ್ಸ್​ ಮಾಡಿ, ಲೈಕ್ಸೂ ಪಡೀರಿ, ಯಾವುದೇ ಸಮಸ್ಯೆ ಇಲ್ಲ. ಆದರೆ ಒಂದು ನೆನಪಿರಲಿ. ರೀಲ್ಸ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್​ ಮಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ!

ಇದೇ ಕಾರಣಕ್ಕೆ ಇದೀಗ ಬೆಂಗಳೂರಿನ ಖ್ಯಾತ ಟಿಕ್​ಟಾಕ್​ ಸ್ಟಾರ್​ ದಿವಾಕರ್​ ಎಂಬ ಯುವಕನಿಗೆ 17,500 ರೂಪಾಯಿ ದಂಡವನ್ನು ಪೊಲೀಸರು ವಿಧಿಸಿದ್ದಾರೆ!

ಅಷ್ಟಕ್ಕೂ ಆಗಿದ್ದೇನೆಂದರೆ, ಈತ ಸುಮ್ಮನೇ ರೀಲ್ಸ್​ ಮಾಡಿ ಅದನ್ನು ಅಪ್​ಲೋಡ್​ ಮಾಡಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಬೈಕ್​ ಮೇಲೆ ರೀಲ್ಸ್​ ಮಾಡುವುದೇ ಹೆಚ್ಚು. ಹೆಲ್ಮೆಟ್​ ಧರಿಸದೇ ರೀಲ್ಸ್​ ಮಾಡಿರುವುದೇ ಈತನಿಗೆ ಈಗ ಸಂಕಟ ತಂದೊಡ್ಡಿದೆ. ಹೆಲ್ಮೆಟ್​ ಇಲ್ಲದೇ ಸಿಕ್ಕಾಪಟ್ಟೆ ರೀಲ್ಸ್​ ಮಾಡಿ ಲಕ್ಷ ಲಕ್ಷ ಅಭಿಮಾನಿಗಳನ್ನು ಈತ ಪಡೆದಿದ್ದರೂ, ಅದೇ ಈ ಯುವಕನಿಗೆ ಈಗ ಮುಳುವಾಗಿದೆ.

ಈತ ತನ್ನ ದಚ್ಚುದಿವು ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಪ್​ಲೋಡ್​ ಮಾಡಿರುವ ವಿಡಿಯೋಗಳ ಆಧಾರದ ಮೇಲೆ ಹೆಲ್ಮೇಟ್​ ಧರಿಸದೇ ಇರುವುದನ್ನು ಪರಿಗಣಿಸಿ ಇಷ್ಟು ದಂಡವನ್ನು ವಿಧಿಸಲಾಗಿದೆ. ವಿಚಿತ್ರ ಎಂದರೆ, ಇನ್ನು ಮುಂದೆ ತಾನು ಹೆಲ್ಮೇಟ್​ ಧರಿಸದೇ ರೀಲ್ಸ್​ ಮಾಡುವುದಿಲ್ಲ ಎಂದು ಹೇಳಿರುವುದನ್ನೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಧನು!

ಈ ಕುರಿತು ಜಂಟಿ ಪೊಲೀಸ್​ ಆಯುಕ್ತ (ಸಂಚಾರ ವಿಭಾಗ) ರವಿಕಾಂತೇಗೌಡ ಅವರು ಮಾಹಿತಿ ನೀಡಿ, ರೀಲ್ಸ್​ ಮಾಡಿದ ಯುವಕನಿಗೆ 17.500 ದಂಡ ಹಾಕಿದ್ದೇವೆ. ಸಾಮಾಜಿಕ ಜಾಲತಾಣವನ್ನು ಪೊಲೀಸ್​ ಇಲಾಖೆ ಮಾನಿಟರ್​ ಮಾಡುತ್ತಿದೆ. ಕಳೆದ ವರ್ಷ 44 ಪ್ರಕರಣ ದಾಖಲಾಗಿದ್ದವು. ಕಳೆದ ವಾರ 40 ವ್ಹೀಲಿಂಗ್​ ಕೇಸ್​ ದಾಖಲಾಗಿದೆ. ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಇನ್​ಸ್ಟಾಗ್ರಾಂ ನೋಡಿ ಕೇಸ್​ ರಿಜಿಸ್ಟರ್​ ಮಾಡುತ್ತಿದ್ದೇವೆ. ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದನ್ನು ನೋಡಿ ದಂಡ ಹಾಕುತ್ತಿದ್ದೇವೆ. ಅಪ್ರಾಪ್ತ ವಯಸ್ಕರು ಈ ರೀತಿ ಮಾಡಿದರೆ ಅವರ ತಂದೆ-ತಾಯಿಯ ಮೇಲೆ ಕೇಸ್​ ಹಾಕುತ್ತಿದ್ದೇವೆ, ಗಾಡಿಯ ಮಾಲೀಕನ ಮೇಲೂ ಕೇಸ್​ ದಾಖಲಾಗುತ್ತದೆ. ಅಪ್ರಾಪ್ತ ವಯಸ್ಕರನ್ನು ಕೌನ್ಸೆಲಿಂಗ್​ ಸೆಂಟರ್​ಗೆ ಕರೆದುಕೊಂಡು ಹೋಗುತ್ತೇವೆ ಎಂದಿದ್ದಾರೆ!

ಈತನ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net