ಮಗನ ಲಗ್ನಪತ್ರಿಕೆ ಹಂಚಲು ಹೋದ ಭಾಲ್ಕಿಯ ಕಾಂಗ್ರೆಸ್‌ ಮುಖಂಡ, ಪತ್ನಿ ಅಪಘಾತದಲ್ಲಿ ಸಾವು! ಸ್ಮಶಾನವಾದ ಮದುವೆ ಮನೆ...

congress
Published on

ಬೀದರ್‌: ಮಗನ ಮದುವೆಯ ಆಮಂತ್ರಣ ಪತ್ರ ನೀಡಲು ಹೋದ ಭಾಲ್ಕಿಯ ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೂರ್ಯಕಾಂತ ಪಾಟೀಲ್ (50) ಹಾಗೂ ಜಯಶ್ರೀ ಪಾಟೀಲ್ (45) ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮದುವೆ ಸಂಭ್ರಮದ ಖುಷಿಯಲ್ಲಿದ್ದ ಮನೆಯಲ್ಲೀಗ ಆಕ್ರಂದ ಮುಗಿಲುಮುಟ್ಟಿದೆ. ಇದೇ ತಿಂಗಳ 26 ರಂದು ಪುತ್ರ ಸಾಯಿನಾಥ ಸೂರ್ಯಕಾಂತ ಪಾಟೀಲ್ ಮದುವೆ ನಿಗದಿಯಾಗಿತ್ತು. ಈ ಸಂಬಂಧ ಬೀದರ್‌ನಲ್ಲಿ ಸಂಬಂಧಿಕರಿಗೆ ಮದುವೆಯ ಕಾರ್ಡ್ ನೀಡಿ ವಾಪಸು ಬರುತ್ತಿದ್ದ ವೇಳೆ ನಿನ್ನೆ (ಬುಧವಾರ) ಮಧ್ಯ ರಾತ್ರಿ ಕಾರು ಅಪಘಾತವಾಗಿದೆ.

ಬೀದರನ ಭಾಲ್ಕಿಯ ಸೇವಾಲಾಲ ತಾಂಡದ ಬಳಿ ಕಾರ್ ಪಲ್ಟಿಯಾಗಿದ್ದು, ದಂಪತಿ ಸ್ಥಳದಲ್ಲಿಯೇ ಮೃಪಟ್ಟಿದ್ದಾರೆ. ತಡ ರಾತ್ರಿಯಾದರೂ ತಂದೆ ತಾಯಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಹಾಗೂ ಅವರ ಫೋನ್‌ ಕೂಡ ಸಿಗದ ಕಾರಣ, ಆತಂಕಗೊಂಡ ಕುಟುಂಬಸ್ಥರು ಇಡೀ ರಾತ್ರಿ ದಂಪತಿಗಾಗಿ ಹುಡುಕಾಟ ನಡೆಸಿದ್ದಾರೆ.

ಕೊನೆಗೆ ಇಂದು ನಸುಕಿನಲ್ಲಿ ಸೇವಾಲಾಲ ತಾಂಡದ ಬಳಿ ಕಾರು ಸಮೇತ ಇಬ್ಬರ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಈಶ್ವರ ಖಂಡ್ರೆ ಹಾಗೂ ‌ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಧನ್ನೂರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net