

ಬೆಳಗಾವಿ: ಮದುವೆಯಾಗಲು ಹುಡುಗಿ ನೋಡಲು ಹೋಗುವ ಖುಷಿಯಲ್ಲಿದ್ದ ಬೆಳಗಾವಿಯ ಕಾನ್ಸ್‌ಟೆಬಲ್ ಅವರು ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಆನಂದ ಸುಲದಾಳ(24) ಮೃತ ದುರ್ದೈವಿ. ಹುದಲಿಯ ನಿವಾಸಿಯಾಗಿದ್ದ ಆನಂದ ಅವರು ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದರು. ಅಲ್ಲಿಂದ ಅವರ ಕುಟುಂಬಸ್ಥರೆಲ್ಲಾ ಸೇರಿ ಕನ್ಯೆ ನೋಡಲು ಹೋಗಲು ತಯಾರಿ ನಡೆಸಿದ್ದರು. ಆದ್ದರಿಂದ ಖುಷಿಯಿಂದ ಆನಂದ ಅವರು ಲಗುಬಗೆಯಿಂದ ಮನೆಗೆ ಹೋಗುತ್ತಿದ್ದಾರೆ.
ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆನಚಿಕಮರಡಿ ಗ್ರಾಮದ ಬಳಿ ಅಪಘಾತ ನಡೆದಿದೆ. ಬೇರೆ ವಾಹನ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆಯೋ ಅಥವಾ ಇವರ ಬೈಕ್ ಸ್ಕಿಡ್ ಆಗಿ ಈ ಅನಾಹುತ ಸಂಭವಿಸಿದೆಯೋ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.