

ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸೂಪರಿಂಟೆಂಡೆಂಟ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಬಿಬಿಎಂಪಿಯ ಕೆಆರ್‌ಐಡಿಎಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿದ್ದ ರಂಗರಾಜು ಎಸ್.ಎ (59) ಮೃತಪಟ್ಟವರು. ರಾತ್ರಿ 11:30 ರ ಸುಮಾರಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಇವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು. ಆದ್ದರಿಂದ ಹುಬ್ಬಳ್ಳಿ - ಬೆಂಗಳೂರು ರೈಲಿಗೆ ಹತ್ತಬೇಕಿತ್ತು, ಆದರೆ ತಪ್ಪು ತಿಳಿವಳಿಕೆಯಿಂದಾಗಿ ಇವರು ಬೆಳಗಾವಿ- ಬೆಂಗಳೂರು ರೈಲಿಗೆ ಹತ್ತಿದ್ದರು. ರೈಲು ಏರುತ್ತಿದ್ದಂತೆಯೇ ತಾವು ಬೇರೆ ರೈಲು ಹತ್ತಿರುವುದು ತಿಳಿದಿದೆ. ಆಗ ಧಾವಂತದಿಂದ ರೈಲನ್ನು ಇಳಿಯಲು ಪ್ರಯತ್ನಿಸಿದ್ದಾರೆ.
ಅದಾಗಲೇ ರೈಲು ಚಲಿಸಲು ಶುರು ಮಾಡಿತ್ತು. ಲಗುಬಗೆಯಿಂದ ರೈಲು ಚಲಿಸುತ್ತಿರುವಾಗಲೇ ಇಳಿಯಲು ಹೋಗಿದ್ದಾರೆ. ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.