ಕನ್ಯೆ ನೋಡಲು ಬಂದು ಸಾವಿನ ಬಾಯಿಗೆ ಹೋದ ಯುವಕ: ಬಾಗಲಕೋಟೆಯಲ್ಲೊಂದು ಮಹಾದುರಂತ

youth
Published on

ಬಾಗಲಕೋಟೆ: ಮದುವೆಗೆ ಹುಡುಗಿಯ ನೋಡಲು ಬಂದು ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಬಾಗಲಕೋಟೆಯ ಇಳಕಲ್ ತಾಲೂಕಿನ ಬಲಕುಂದಿ ತಾಂಡಾದಲ್ಲಿ ನಡೆದಿದೆ.

ಪ್ರತಾಪ್ ನಾಯಕ್ (24) ಮೃತ ದುರ್ದೈವಿ. ಈತ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತರಿಗೆದೊಡ್ಡಿ ಗ್ರಾಮದ ಯುವಕ.

ಕುಟುಂಬದವರ ಸೇರಿ ನಿನ್ನೆ ಬಲಕುಂದಿ ತಾಂಡಾಕ್ಕೆ ಕನ್ಯೆ ನೋಡಲು ಬಂದಿದ್ದರು. ಈ ವೇಳೆ ಬಹಿರ್ದೆಸೆಗಾಗಿ ಕಾಲುವೆ ಬಳಿ ಯುವಕ ಹೋಗಿದ್ದ. ಕಾಲುಜಾರಿ ಕಾಲುವೆಗೆ ಬಿದ್ದು ಆತ ಮೃತಪಟ್ಟಿದ್ದಾನೆ. ಇತ್ತೀಚಿಗೆ ಸುರಿದ ಮಳೆಯಿಂದ ಕಾಲುವೆಯಲ್ಲಿ ನೀರು ಬಂದಿತ್ತು. ಇದೇ ಜಾಗದಲ್ಲಿ ಯುವಕ ಬಹಿರ್ದೆಸೆಗೆ ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಅಗ್ನಿಶಾಮಕ ಸಿಬ್ಬಂದಿ ಶವ ಹೊರತೆಗೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net