ಧಾರಾಕಾರ ಮಳೆಗೆ ದೇವಾಲಯಕ್ಕೆ ಜಲದಿಗ್ಬಂಧನ: ಮುಳುಗುವ ಸ್ಥಿತಿಯಲ್ಲಿ ಹೊಳೆಬಸವೇಶ್ವರ

1122582
Published on

ಬಾಗಲಕೋಟೆ: ಕಳೆದ ಒಂದು ವಾರದಿಂದ ಬಾಗಲಕೋಟೆ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಳವಾಗಿದೆ, ಇದರಿಂದಾಗಿ ಮಧೋಳ ಮಾಚಕನೂರು ಗ್ರಾಮದಲ್ಲಿರುವ ಹೊಳೆಬಸವೇಶ್ವರ ದೇವಸ್ಥಾನವು ಜಲಾವೃತವಾಗಿರುವ ಸ್ಥಿತಿಗೆ ತಲುಪಿದೆ. ಈ ದೇವಸ್ಥಾನವು ಘಟಪ್ರಭಾ ನದಿ ದಡದ ಮೇಲಿದ್ದು, ದೇವಸ್ಥಾನಕ್ಜೆ ಜಲದಿಗ್ಬಂಧನವಾಗಿದೆ.

ಇದರಿಂದಾಗಿ ದೇವರ ಪೂಜೆಯನ್ನು ಮಾಡಲು ಸಾಧ್ಯವಾಗದೇ ಭಕ್ತರು ವಾಪಸ್ ಹೋಗುವಂತಾಗಿದೆ. ದೇಗುಲದ ಮೆಟ್ಟಿಲು, ಕಟ್ಟೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಯಾವುದೇ ಕ್ಷಣದಲ್ಲೂ ಸಂಪೂರ್ಣ ದೇವಾಲಯ ಮುಳುಗುವ ಸಧ್ಯತೆ ಇದೆ.

ಇದಾಗಲೇ ದೇಗುಲದ ಮುಂಭಾಗದ ಕಂಬಗಳು ಎರಡು ಅಡಿಯಷ್ಟು ಎತ್ತರದ ನೀರಿನಿಂದಾಗಿ ಮುಳುಗಿಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net