'ಲಕ್ಷ್ಮೀ ಬಾರಮ್ಮ' ಖ್ಯಾತಿಯ ಚಂದು ಮನೆಗೆ ಸಾಕ್ಷಾತ್​ ಲಕ್ಷ್ಮಿಯ ಆಗಮನ: ಹೆಣ್ಣುಮಗುವಿನ ಜನನ

chandu
Published on

ಬೆಂಗಳೂರು: ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಜನಪ್ರಿಯರಾಗಿರುವ ನಟ ಚಂದು ಗೌಡ ಅವರಿಗೆ ಹೆಣ್ಣು ಮಗು ಜನಿಸಿದೆ. ಕನ್ನಡಿಗರ ಮನೆ ಮಾತಾಗಿದ್ದ ಲಕ್ಷ್ಮೀ ಬಾರಮ್ಮ ಹಾಗೂ ತೆಲುಗುವಿನ ಸೂಪರ್ ಹಿಟ್ ತ್ರಿನಯನಿ ಧಾರಾವಾಹಿಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಚಂದು ಗೌಡ ಅವರೀಗ ಹೆಣ್ಣುಮಗುವಿನ ತಂದೆಯಾಗಿದ್ದಾರೆ.

ಬೆಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ (ಆಗಸ್ಟ್​ 14) ಚಂದು ಅವರ ಪತ್ನಿ ಶಾಲಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಚಂದು ಮತ್ತು ಶಾಲಿನಿ ಅವರ ಮದುವೆಯು 2020ರ ಅಕ್ಟೋಬರ್​ನಲ್ಲಿ ಸರಳವಾಗಿ ನಡೆದಿತ್ತು. ಕರೊನಾ ವೈರಸ್​ ಹಿನ್ನೆಲೆಯಲ್ಲಿ ಕೆಲವೇ ಮಂದಿಗೆ ಮದುವೆಗೆ ಆಮಂತ್ರಿಸಲಾಗಿತ್ತು. ಆದರೆ ಶಾಲಿನಿ ಅವರ ಸೀಮಂತ ಮಾತ್ರ ಅದ್ಧೂರಿಯಾಗಿ ನಡೆದಿತ್ತು.

ಮಾಡೆಲಿಂಗ್​ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶಾಲಿನಿ ಹಾಗೂ ಚಂದು ನಾಲ್ಕು ವರ್ಷ ಸ್ನೇಹಿತರಾಗಿದ್ದು, ನಂತರ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಚಂದು ಅವರು ಧಾರಾವಾಹಿ ಮಾತ್ರವಲ್ಲದೇ ಚಾಟ್ ಕಾರ್ನರ್ ಎಂಬ ಟಾಕಿಂಗ್ ಶೋ ಮೂಲಕ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು 'ದ್ವಿಪಾತ್ರ', 'ಶ್ರೀ', 'ಕಮರೊಟ್ಟು ಚೆಕ್‌ಪೋಸ್ಟ್' ಮುಂತಾದವುಗಳಲ್ಲಿ ನಟಿಸಿದ್ದಾರೆ. 'ಜಾಕ್‌ಫಾಟ್' ಹಾಗೂ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದಲ್ಲಿಯೂ ಮಿಂಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net