ಅಧ್ಯಕ್ಷರಾಗಿ ಎಸ್.ಬಿ.ಸುಗಂಧರಾಜು ಆಯ್ಕೆ

ಅಧ್ಯಕ್ಷರಾಗಿ ಎಸ್.ಬಿ.ಸುಗಂಧರಾಜು ಆಯ್ಕೆ
Published on

ತಿ.ನರಸೀಪುರ: ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಬಿ.ಸುಗಂಧರಾಜು, ಉಪಾಧ್ಯಕ್ಷರಾಗಿ ಕೆಇಬಿ ಎಂ.ಸಿದ್ದಲಿಂಗಸ್ವಾಮಿ ಸೋಮವಾರ ಅವಿರೋಧ ಆಯ್ಕೆಯಾದರು.

ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಕಾಂಪ್ಲೆಕ್ಸ್‌ನಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಎಸ್.ಬಿ.ಸುಗಂಧರಾಜು ಮತ್ತು ಕೆಇಬಿ ಎಂ.ಸಿದ್ದಲಿಂಗಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ನಿರ್ದೇಶಕರಾಗಿ ಎಂ.ಸೀಹಳ್ಳಿ ಗುರುಮೂರ್ತಿ, ರೈಸ್ ಮಿಲ್ ಎಂ.ಎಸ್.ಸುಧಾಕರ, ಪೂಜಿತ್ ಮೆಡಿಕಲ್ ಕುಮಾರ್, ಬಿ.ಮಂಟೇಲಿಂಗಪ್ಪ, ಕೇಬಲ್ ಬಿ.ಜಿ.ರಾಜಶೇಖರ್, ಪುರಸಭೆ ಸದಸ್ಯೆ ಜೆ.ರೂಪಶ್ರೀ ಪರಮೇಶ್, ಸವಿತಾ ಪ್ರಕಾಶ್ ಅವರನ್ನು ಆಯ್ಕೆಮಾಡಲಾಯಿತು.

ಸಭೆಯ ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿಯಾಗಿ ಬಿ.ಎಲ್.ಮಂಜುನಾಥ್ ಕಾರ್ಯನಿರ್ವಹಿಸಿದರು.

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ವಕೀಲ ಜ್ಞಾನೇಂದ್ರಮೂರ್ತಿ, ಮುಖಂಡ ನಿಲಸೋಗೆ ಶೇಖರಪ್ಪ, ಹಿರಿಯೂರು ಪ್ರಕಾಶ್, ಆಡಿಟರ್ ಮಂಜುನಾಥ್, ಹೊಸೂರುಹುಂಡಿ ತೊಂಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net