ಎಸ್.ಬಿ. ಸತ್ಯನಾರಾಯಣ ಮಧ್ವ ಮಹಾಮಂಡಲ ಅಧ್ಯಕ್ಷ

S.B. Satyanarayana Madhva Mahamandal President
ಎಸ್.ಬಿ. ಸತ್ಯನಾರಾಯಣ
Published on


ಬಾಗಲಕೋಟೆ : ನವನಗರದ ಶ್ರೀ ಕೃಷ್ಣ ಮಠ ಆವರಣದಲ್ಲಿರುವ ಅಖಿಲ ಭಾರತ ಮಾಧ್ವ ಮಹಾಮಂಡಲ ವಿದ್ಯಾರ್ಥಿ ನಿಲಯದ 2024-27ನೇ ಸಾಲಿಗೆ ಪದಾಧಿಕಾರಿಗಳನ್ನು ಘೋಷಿಸಲಾಗಿದೆ.

ಗೌರವಾಧ್ಯಕ್ಷರಾಗಿ ಬ್ರಾಹ್ಮಣ ಸಮಾಜದ ಹಿರಿಯರಾದ ಸಿ.ಎನ್. ದಾಸ, ಅಧ್ಯಕ್ಷರಾಗಿ ಎಸ್.ಬಿ. ಸತ್ಯನಾರಾಯಣ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಮಾರ್ಕೋಡ, ನರಸಿಂಹ ಆಲೂರ, ಡಾ. ಗಿರೀಶ ಮಸೂರಕರ ಅವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯದರ್ಶಿಯಾಗಿ ಡಾ. ಕೆ. ರಾಘವೇಂದ್ರರಾವ್, ಸಹ ಕಾರ್ಯದರ್ಶಿಯಾಗಿ ಪ್ರದೀಪ ಪರ್ವತಿಕರ, ಕೋಶಾಧ್ಯಕ್ಷರಾಗಿ ಗಿರೀಶ ಉಡುಪಿ, ಕಾರ್ಯಕಾರಿಣಿ ಸದಸ್ಯರಾಗಿ ಗೋಪಾಲ ಜಂಬಗಿ, ಲಕ್ಷ್ಮೀನಾರಾಯಣ ತಂತ್ರಿ, ಕೆ. ವೆಂಕಟೇಶರಾವ್, ಪ್ರಸಾದ ಕಾರಂತ, ವಿನಾಯಕ ತಾಳಿಕೋಟಿ, ಭಾಸ್ಕರ ಮನಗೂಳಿ, ಕೃಷ್ಣಾ ಅಥಣಿ ಅವರನ್ನು ಆಯ್ಕೆ ಮಾಡಲಾಗಿದೆ.

ಮಹಾಮಂಡಲದ ಕೇಂದ್ರ ಘಟಕದ ಅಧ್ಯಕ್ಷ ಎಚ್.ವಿ.ಗೌತಮ, ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ಕೋಶಾಧ್ಯಕ್ಷ ವಿ.ಕೆ. ಹರಿದಾಸ ಅವರುಗಳು ಶಾಶ್ವತ ಆಹ್ವಾನಿತರಾಗಿರಲಿದ್ದಾರೆ. ಮಹಾಮಂಡಲದ ಕೇಂದ್ರ ಘಟಕದ ಕಾರ್ಯದರ್ಶಿ ಎನ್.ಎಸ್. ದ್ವಾರಕನಾಥ ಅವರು ಈ ಆಯ್ಕೆಗಳನ್ನು ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net