VIDEO: ಹೇಗಾದ್ರೂ ಮಾಡಿ ಬೆಳಗಾವಿ ಇಬ್ಭಾಗ ಮಾಡಪ್ಪಾ ಎಂದು ದೇವರಲ್ಲಿ ಮೊರೆ ಹೋದ ಗ್ರಾಮಸ್ಥರು

athani
Published on

ಚಿಕ್ಕೋಡಿ: ಯಾವುದಾದರೂ ಬೇಡಿಕೆ ಈಡೇರಿಸಬೇಕು ಎಂದರೆ ಸರ್ಕಾರ, ಮಂತ್ರಿಗಳು ,ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗೋದು ಸಾಮಾನ್ಯ. ಆದರೆ ಬೆಳಗಾವಿ ಜಿಲ್ಲೆಯ ಇಬ್ಭಾಗಕ್ಕೆ ದೇವರ ಮೊರೆ ಹೋಗಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ದೇವ್ರೆ ಹೇಗಾದ್ರೂ ಮಾಡಿ ಬೆಳಗಾವಿ ಜಿಲ್ಲೆ ಇಬ್ಭಾಗ ಮಾಡಿಬಿಡಪ್ಪ ಎಂದು ಸಂಕಲ್ಪ ತೊಟ್ಟಿದ್ದಾರೆ ಹೋರಾಟಗಾರರು. ಬೆಳಗಾವಿ ಜಿಲ್ಲೆಯನ್ನು ತುಂಡು ಮಾಡಿ ಅಥಣಿ ನೂತನ ಜಿಲ್ಲೆ ರಚನೆಗೆ ಸಂಕಲ್ಪ ತೊಡಲಸಾಗಿದೆ.

ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಮೇಲೆ ಹೋರಾಟಗಾರರಿಂದ ಸಂಕಲ್ಪ ನಡೆದಿದೆ. ಹನುಮಾನ ದೇವಸ್ಥಾನದಲ್ಲಿ ಕೆಂಪು ವಸ್ತ್ರದಲ್ಲಿ ತೆಂಗಿನಕಾಯಿ ಕಟ್ಟಿ ಸಂಕಲ್ಪ ಮಾಡಿದ್ದಾರೆ. ಆದಷ್ಟು ಬೇಗನೆ ಅಥಣಿ ಜಿಲ್ಲೆ ರಚನೆಗೆ ದೇವರಲ್ಲಿ ಹರಕೆ ಹೊರಲಾಗಿದೆ. (ದಿಗ್ವಿಜಯ ನ್ಯೂಸ್)

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net