

ಮದ್ದೂರು: ತಾಲೂಕಿನ ಸಾದಳಲು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ಎಸ್.ಆನಂದ ಅವಿರೋಧವಾಗಿ ಆಯ್ಕೆಯಾದರು.
ಸತೀಶ್‌ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಚುನಾವಣೆ ನಿಗದಿಯಾಗಿತ್ತು. ಆನಂದ್ ಅವರನ್ನು ಹೊರತು ಬೇರಾರೂ ನಾಮಪತ್ರ ಸಲ್ಲಿಸದ ಕಾರಣಚುನಾವಣಾಧಿಕಾರಿ ವಿದ್ಯಾಶ್ರೀ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಎಸ್.ಆನಂದ್ ಮಾತನಾಡಿ, ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಂಚಾಯಿತಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಉಪಾಧ್ಯಕ್ಷೆ ಚೆನ್ನಾಜಮ್ಮ, ಸದಸ್ಯರಾದ ಸತೀಶ್, ಸಿದ್ದಪ್ಪಗೌಡ, ಉಮೇಶ್, ಪುಟ್ಟಸ್ವಾಮಿ, ಪ್ರಕಾಶ್ ರಾಜು, ಚಂದ್ರಪ್ರಭ, ಆನಂದ್, ನಂದಿನಿ, ಮಧುಸೂದನ್, ಶೋಭಾ, ರಾಜೇಶ್ವರಿ, ಶಾಂತಮ್ಮ, ಪಿಡಿಒ ಜಿ.ಎ.ಹೇಮಾ ಇದ್ದರು.