ಆಲಮಟ್ಟಿಗೆ ಪಿಕ್‌ನಿಕ್‌ಗೆ ಹೋದ ಶಾಲೆಯ ಟೆಂಪೋ ಪಲ್ಟಿ, ಕ್ಲೀನರ್ ಸಾವು, 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

vijayapua
Published on

ವಿಜಯಪುರ: ಸರಕಾರಿ ಶಾಲಾ ವಿದ್ಯಾರ್ಥಿಗಳನ್ನು ಪಿಕಿನಿಕ್‌ಗೆ ಕರೆದುಕೊಂಡ ಹೊರಟಿದ್ದ ಟೆಂಪೋ ಟ್ರಾವೆಲ್ಸ್ ಪಲ್ಟಿಯಾಗಿದೆ.

ತಾಳಿಕೋಟಿ ತಾಲೂಕಿನ ಕೂಚಬಾಳ-ಬಾವೂರ ಮಧ್ಯೆ ದುರ್ಘಟನೆ ಶುಕ್ರವಾರ ಈ ಘಟನೆ ಮಡೆದಿದ್ದು, ಕ್ಲೀನರ್ ದಾವಲಸಾಬ ಅಲ್ಲಿಸಾಬ ಸಾಲವಾಡಗಿ (40) ಸಾವಿಗೀಡಾಗಿದ್ದಾರೆ. 15 ಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಳಿಕೋಟೆ ತಾಲೂಕಿನ ಚೋಕಾರಿ ಸರಕಾರಿ ಪ್ರಾಥಮಿಕ ಶಾಲೆಯ 30 ಕ್ಕೂ ಹೆಚ್ಚು ಮಕ್ಕಳನ್ನು ಹೊತ್ತುಕೊಂಡು ಆಲಮಟ್ಟಿ ಕಡೆಗೆ ಹೊರಟಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಶಿಕ್ಷಣ ಇಲಾಖೆ ಅನುಮತಿ ಇಲ್ಲದೇ ಶಾಲಾ ಮಕ್ಕಳು ಪಿಕ್ ನಿಕ್ ಗೆ ಹೊರಟಿದ್ದರೆಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net