ಕವಿರತ್ನ ಕಾಳಿದಾಸ ಕಾವ್ಯಗಳ ಅರಿವು ಅಗತ್ಯ

HN 2-4
Published on

ವಿಜಯಪುರ: ಭಾರತೀಯ ಸಂಸ್ಕೃತಿ ಉಳಿವಿಗಾಗಿ ಕವಿರತ್ನ ಕಾಳಿದಾಸರ ಮಹಾಕಾವ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ಕಾಳಿದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎ. ಜಿದ್ದಿ ಹೇಳಿದರು.

ಕಾಳಿದಾಸರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದ್ದು, ಅದಕ್ಕಾಗಿ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಡಿ.5ರಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕವಿರತ್ನ ಕಾಳಿದಾಸ ಕಾವ್ಯರಸಾಸ್ವಾದ ಕಾರ್ಯಕ್ರಮಕ್ಕೆ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ. ಕಾಳಿದಾಸ ರಘುವಂಶ ಮಹಾಕಾವ್ಯದ ಭಾಗ-1 ಮತ್ತು 2 ರ ಚಿಂತನಾ ಗೋಷ್ಠಿಯಲ್ಲಿ ಸಂಸ್ಕೃತ ಪ್ರಾಧ್ಯಾಪಕ ಜಿ.ಆರ್. ಅಂಬಲಿ ಉಪನ್ಯಾಸವನ್ನು ನೀಡಲಿದ್ದಾರೆ. ಸರ್ವಜ್ಞ ವಿಹಾರ ವಿದ್ಯಾಪೀಠ ಕುಲಪತಿ ಪಂಡಿತ ಮದ್ವಾಚಾರ್ಯ ಮೋಕಾಶಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾಳಿದಾಸ ಮಹಾಕಾವ್ಯದ 2ನೇ ಉಪನ್ಯಾಸವನ್ನು ಸಿಕ್ಯಾಬ್ ಸಂಸ್ಥೆಯ ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಕಾಖಂಡಕಿ ನೀಡಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಿ.ಡಿ. ವಸದ, ಸಹಕಾರ ಇಲಾಖೆ ನಿವೃತ್ತ ಉಪ ನಿಬಂಧಕ ಬಿ.ಆರ್. ಬನಸೋಡೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಗುರನಗೌಡ ಪಾಟೀಲ, ಮುಖಂಡರಾದ ಅಶೋಕ ಜಿದ್ದಿ, ಆರ್.ಎಸ್. ವಾಡೇದ, ಕೆ.ಆರ್. ನಾಗೋಡ, ಕೆ. ಆರ್. ಜಾಧವ, ಎಚ್.ಎಸ್. ಮುಳವಾಡ, ಡಿ.ಕೆ. ನಾಗೋಡ, ಎ.ಎಂ. ಬಗಲಿ, ಎಂ.ಎನ್. ಕಣಮೇಶ್ವರ, ಎಸ್.ಪಿ. ಬಿರಾದಾರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net