ಸರ್ಕಾರಿ ನೌಕರಿಯಲ್ಲಿ ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿ: ಸಿಎಂ ಘೋಷಣೆ- ಉದ್ಯೋಗಕ್ಕಾಗಿ ಆಡಬೇಡಿ ಎಂದು ಕಿವಿಮಾತು

bommai
Published on

ಬೆಂಗಳೂರು: ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ 2ರಷ್ಟು ಮೀಸಲಾತಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವಿಜೇತರಿಗೆ ಸನ್ಮಾನ ಮತ್ತು ಕ್ರೀಡಾಪಟುಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲರಿಗೂ, ಕ್ರೀಡಾ ಮನೋಭಾವ ಇರಬೇಕು ಎಂಬ ಮಾತಿದೆ. ಕ್ರೀಡಾ ಮನೋಭಾವದಿಂದ ಡಿಸಿಪ್ಲಿನ್ ಬರಲಿದೆ. ಡಿಸಿಪ್ಲೇನ್​ನಿಂದ ಕ್ಯಾರೆಕ್ಟರ್ (ಶಿಸ್ತಿನಿಂದ ಉತ್ತಮ ನಡತೆ) ಬರಲಿದೆ ಎಂದರು. ಉತ್ತಮ ನಡತೆ ಮಾಡಿಕೊಳ್ಳುವುದು ಮುಖ್ಯ. ಆಗ ಜೀವನದಲ್ಲಿ ಖುಷಿಯಾಗಿ ಇರಬಹುದು ಎಂದರು.

ಸರ್ಕಾರ ಏನು ಮಾಡಬೇಕು ಎಂದು ನೀವು ಹೇಳುತ್ತೀರೋ ಹಾಗೆಯೇ ಸರ್ಕಾರಕ್ಕೆ ನೀವು ಏನು ಮಾಡಬೇಕು ಅಂತ ಯೋಚನೆ ಮಾಡಿ. ನೌಕರಿಗಾಗಿ ಆಟ ಆಡಬೇಡಿ, ನೌಕರಿ ಬೇಕು ನಿಜ. ಆದರೆ ನೌಕರಿಗಾಗಿ ಆಡಬೇಡಿ ಎಂದ ಸಿಎಂ ನೌಕರಿ ಕೊಡೋಣ ಎಂದು ಭರವಸೆ ನೀಡಿದರು.

ದತ್ತು ಯೋಜನೆ ಕರ್ನಾಟಕದಲ್ಲಿ ಮಾತ್ರ ಇದೆ. ಗ್ರಾಮೀಣ ಕ್ರೀಡಾಕೂಟ ಈ ವರ್ಷದಿಂದ ಆರಂಭ ಆಗಲಿದೆ. ಕ್ರೀಡಾಂಗಣಗಳ ನಿರ್ಮಾಣ ಮತ್ತು ಅಭಿವೃದ್ಧಿ ಗೆ ಗಮನ ನೀಡಲಾಗಿದೆ ಎಂದರು. ಸರ್ಕಾರ ಕ್ರೀಡೆ ಹಾಗೂ ಕ್ರೀಡಾಪಟುಗಳ ಪರ ಇದೆ. ಎಲ್ಲ ದೃಷ್ಟಿಯಿಂದಲೂ ನಿಮ್ಮ ರಕ್ಷಣೆಗೆ ಸರ್ಕಾರ ಬದ್ಧ. ನೀವು ನಿಮ್ಮ ಕೆಲಸ ಮಾಡಿ ಎಂದ ಕ್ರೀಡಾ ಪಟುಗಳಿಗೆ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net