19ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ

Published on

ಅರಕಲಗೂಡು : ನನೆಗುದಿಗೆ ಬಿದ್ದಿರುವ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವುದು ಸೇರಿದಂತೆ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮಾ. 19ರಂದು ತಾಲೂಕು ಕಚೇರಿ ಎದುರು ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆ ತಾಲೂಕು ಅಧ್ಯಕ್ಷ ಸೀಬಳ್ಳಿ ಯೋಗಣ್ಣ ತಿಳಿಸಿದರು.
ಮಲ್ಲಿಪಟ್ಟಣ ಏತ ನೀತರಾವರಿ ಯೋಜನೆ ಪ್ರಾರಂಭವಾಗಿ ದಶಕ ಕಳೆದರೂ ಪೂರ್ಣಗೊಂಡಿಲ್ಲ, ಕಾಮಗಾರಿ ನನೆಗುದಿಗೆ ಬಿದ್ದಿದೆ. ಕೊಟ್ಯಂತರ ವೆಚ್ಚದ ಈ ಯೋಜನೆಗೆ ಖರೀದಿಸಿದ್ದ ಕೊಳವೆಗಳು, ಯಂತ್ರೋಪಕರಣಗಳು ತುಕ್ಕುಹಿಡಿದು ಹಾಳಾಗುತ್ತಿದೆ, ಇದನ್ನು ಪೂರ್ಣಗೊಳಿಸಿ ರೈತರ ಜಮೀನಿಗೆ ನೀರುಹರಿಸುವ ಇಚ್ಚಾಶಕ್ತಿಯನ್ನು ಸರ್ಕಾರವಾಗಲೀ ಜನಪ್ರತಿನಿಧಿಗಳಾಗಲಿ ತೋರುತ್ತಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net