

ಬೆಳಗಾವಿ: ಮೂಡಲಗಿ ತಾಲ್ಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿರೊಬ್ಬರನ್ನು ಅವರ ಕೃಷಿಭೂಮಿ ಬಳಿ ಫೆ.14ರಂದು ರಾತ್ರಿ 11.30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಹಣಕ್ಕಾಗಿ ಅಪಹರಿಸಿ, ಬಿಡುಗಡೆಗಾಗಿ ₹5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.
ಬಸವರಾಜ ನೀಲಪ್ಪ ಅಂಬಿ(48) ಅಪಹರಣಕ್ಕೆ ಒಳಗಾದವು. ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಗೋಕಾಕ ತಾಲ್ಲೂಕಿನ ದಾನಾಪುರದಲ್ಲಿ ಇರುವ ಕೃಷಿ ಜಮೀನಿನ ಬಳಿ ಅವರನ್ನು ಅಪಹರಿಸಲಾಗಿದೆ.
‘ಬಸವರಾಜ ಅಂಬಿ ಅವರನ್ನು ಅಪಹರಿಸಿದ ಅಪರಿಚಿತರು, ಫೆ.15ರಂದು ಬಸವರಾಜ ಪತ್ನಿ ಶೋಭಾ ಅವರಿಗೆ ಕರೆಮಾಡಿ ₹5 ಕೋಟಿಗೆ ಬೇಡಿಕೆ ಇಟ್ಟರು. ಬಸವರಾಜ ಅವರ ಪುತ್ರ ಹುಲಿರಾಜ ಹಾಗೂ ಕೆಲವರು ನಿಪ್ಪಾಣಿಯಲ್ಲಿ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿರುವ ಹೋಟೆಲ್ ಬಳಿ, ಸುಮಾರು ₹10 ಲಕ್ಷ ಪಾವತಿಸಲು ಹೋಗಿದ್ದರು. ಆದರೆ, ಅಪಹರಣಕಾರರು ಬಸವರಾಜ ಅವರನ್ನು ಬಿಡುಗಡೆ ಮಾಡಲಿಲ್ಲ. ಹಣ ನೀಡಲು ಹೋಗಿದ್ದವರ ಮುಂದೆ ನೋಂದಣಿ ಸಂಖ್ಯೆ ಹೊಂದಿರದ ವಾಹನವೊಂದು ಹಾದುಹೋಯಿತು. ಅದರಲ್ಲಿ ಕೆಲವರಷ್ಟೇ ಕುಳಿತಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘