ಆರ್‌ವೈಸಿ ಎಮ್ಮೆಮಾಡು ತಂಡ ಚಾಂಪಿಯನ್

MDK02
Published on

ಮಡಿಕೇರಿ: ಕಬಡಕೇರಿ ವಿಶ್ವಶಾಂತಿ ಬಳಗದ ವತಿಯಿಂದ ೧೫ನೇ ವರ್ಷದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಆರ್‌ವೈಸಿ ಎಮ್ಮೆಮಾಡು ತಂಡ ಚಾಂಪಿಯನ್ನಾಗಿ ಹೊರಹೊಮ್ಮಿದರೆ, ಸಿರಾಜ್ ಫ್ರೆಂಡ್ಸ್ ತಂಡ ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.


ಕಬಡಕೇರಿ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುಮಾರು ೧೬ ತಂಡಗಳು ಭಾಗವಹಿಸಿ, ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿತು. ಮೊದಲು ನಡೆದ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಆರ್‌ವೈಸಿ ನಾಡು ತಂಡ, ಡೆಕ್ಕನ್ ನಾಪೋಕ್ಲು ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿ ಫೈನಲ್ ಪಂದ್ಯಾವಳಿಯಲ್ಲಿ ಸಿರಾಜ್ ಫ್ರೆಂಡ್ಸ್ ತಂಡ, ಹೋದವಾಡ ತಂಡವನ್ನು ಮಣಿಸಿ, ಫೈನಲ್ ಪ್ರವೇಶಿಸಿತು.


ಕಬಡಕೆರಿ ಯುವಕ ಸಂಘದ ಅಧ್ಯಕ್ಷ ಚೆಟ್ಟಿಮಾಡ ಬಾಲ ಕೃಷ್ಣ ಅಧ್ಯಕ್ಷತೆಯ ಮುಂಜಾನೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಕ್ರೀಡೆಯಿಂದ ಸ್ನೇಹ, ಸೌಹಾರ್ದತೆ ಹೆಚ್ಚಾಗಿದ್ದು ಸಂತೋಷ ವಿಷಯ. ಆದರೆ ಜಾತಿ ಆಧಾರದಲ್ಲಿ ನಡೆಯುವ ಕ್ರೀಡೆಗಳಿಗಿಂತ ಎಲ್ಲಾ ವರ್ಗದವರನ್ನು ಸೇರಿಸಿ ಕ್ರೀಡೆಗಳು ನಡೆಸುವುದು ಈ ಸಮಾಜಕ್ಕೆ ಉತ್ತಮ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಕಬಡಕೇರಿ ಯುವಕ ಸಂಘದ ಸದಸ್ಯರು ನಿವೃತ್ತ ಶಿಕ್ಷಕ ಚೌರಿರ ಉದಯರವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.


ಈ ಸಂದರ್ಭ ಪ್ರಮುಖರಾದ ಇಸಾಕ್ ಖಾನ್ ಸುಂಟಿಕೊಪ್ಪ, ಇಸ್ಮಾಯಿಲ್ ನಾಪೋಕ್ಲು, ಮೈದು ಕೊಟ್ಟಮುಡಿ, ಜಾಸೀರ್, ಪತ್ರಕರ್ತ ನೌಫಲ್ ಕಡಂಗ, ಬಲ್ಲಚಂಡ ಗೌತಮ್, ಸುನಿಲ್, ಮಂಜು ಕೂಡಿಗೆ, ಸಂಘದ ಸದಸ್ಯ ಯುನಸ್, ವಿಶ್ವ ನಾಥ್, ಆಚು, ಆಶಿಮ್, ಫೇರುಜ್, ಆಶಿಫ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net