ರಸಗೊಬ್ಬರ ಖರೀದಿ ವೇಳೆ ನೂಕುನುಗ್ಗಲು

ಬೇಡಿಕೆಗೆ ತಕ್ಕಂತೆ ರಸಗೊಬ್ಬರ ನೀಡಬೇಕೆಂದು ಒತ್ತಾಯಿಸಿ ತೋರಣದಿನ್ನಿಯ ಪ್ರಾಕೃಪಸ ಸಂಘದ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಸೂರ್ಯಪ್ರಕಾಶ ಸ್ವಾಮಿ, ಹುಸೇನಪ್ಪ ತಳವಾರ, ರಮೇಶ, ಮಹಾದೇವ ಹಿರೆದಿನ್ನಿ, ಶರಣಪ್ಪ ಶಾವಂತಗೇರ ಇತರರಿದ್ದರು.

Published on

ಕವಿತಾಳ: ಭತ್ತ ನಾಟಿ ಮಾಡಿದ ರೈತರು ಸಮೀಪದ ತೋರಣದಿನ್ನಿಯಲ್ಲಿ ಯೂರಿಯಾ ರಸಗೊಬ್ಬರ ಖರೀದಿಗೆ ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು.

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರತಿವರ್ಷ ರೈತರು ರಸಗೊಬ್ಬರ ಖರೀದಿಸುತ್ತಾರೆ. ಆದರೆ, ಈ ವರ್ಷ ರಸಗೊಬ್ಬರ ಕೊರತೆ ಹೆಚ್ಚಾಗಿದ್ದು, ರೈತರು ಪರದಾಡುವಂತಾಗಿದೆ. ವ್ಯವಸ್ಥಾಪಕ ಮಂಜುನಾಥ ಅವರು ಬೆಳಗಿನ ಜಾವ 6ಗಂಟೆಗೆ ಕೇಂದ್ರಕ್ಕೆ ಬಂದು ರೈತರಿಗೆ ಸರದಿಯಲ್ಲಿ ಗೊಬ್ಬರ ವಿತರಿಸಲಾಗಿದೆ. ಕೇಂದ್ರಕ್ಕೆ ಕೇವಲ 400 ಚೀಲ ಬಂದಿದ್ದು, ಹೆಚ್ಚಿನ ಗೊಬ್ಬರಕ್ಕಾಗಿ ಮನವಿ ಮಾಡಲಾಗಿದೆ ಎಂದರು. ರೈತರು ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದಕ್ಕೆ ಸಂಘದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಪ್ರತಿಕ್ರಿಯಿಸಿ, ಒಂದು ವಾರದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದರು. ಪ್ರಮುಖರಾದ ಶರಣಪ್ಪ ನಾಯಕ, ಹುಸೇನಪ್ಪ ತಳವಾರ, ರಮೇಶ, ಮಹಾದೇವ ಹಿರೆದಿನ್ನಿ, ಶರಣಪ್ಪ ಶಾವಂತಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net