

ಮೈಸೂರು: ನಾಲ್ಕು ವರ್ಷ, ಹತ್ತು ತಿಂಗಳ ಪುಟಾಣಿ ಬಾಲಕಿ ಸಿ.ರುಷಿಕಾ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
26 ಸೆಕೆಂಡ್‌ಗಳಲ್ಲಿ 26 ಗ್ಲಾಸ್ ಶೀಟ್‌ಗಳನ್ನು ತನ್ನ ಬಲಗೈಯಿಂದ ಒಡೆದು ಹಾಕುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದಿದ್ದಾಳೆ. ಈಕೆ ಬಂಬೂಬಜಾರ್ ನಿವಾಸಿ ಚಂದ್ರು ಹಾಗೂ ಎಸ್.ಭಾಗ್ಯಲಕ್ಷ್ಮೀ ದಂಪತಿಯ ಪುತ್ರಿ.