ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025ರ ಪ್ರಿನ್ಸ್ ಪ್ರಶಸ್ತಿ ಗೆದ್ದ ರುಶಭ್ ರಾವ್

mng--4 June Rushab Rao
Published on

ಮಂಗಳೂರು : ನಗರದ ಕುಲಶೇಖರದ 8 ವರ್ಷದ ರುಶಭ್ ರಾವ್ ಮೇ 25 ರಂದು ಗೋವಾದಲ್ಲಿ ಆಯೋಜಿಸಲಾದ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025 ಸ್ಪರ್ಧೆಯಲ್ಲಿ ಪ್ರಿನ್ಸ್ ಆಫ್ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ ಎಂಬ ಪ್ರಶಸ್ತಿ ಗೆದ್ದು, ಮಂಗಳೂರಿಗೆ ಕೀರ್ತಿ ತಂದಿದ್ದಾರೆ.

ಲೂರ್ಡ್ಸ್ ಸೆಂಟ್ರಲ್ ಶಾಲೆ, ಬಿಜೈ , ಮಂಗಳೂರು ಇಲ್ಲಿನ ಮೂರನೇ ತರಗತಿಯ ವಿದ್ಯಾರ್ಥಿಯಾದ ರುಶಭ್, ತನ್ನ ಅಪ್ರತಿಮ ಪ್ರತಿಭೆ ಮತ್ತು ಆತ್ಮವಿಶ್ವಾಸದಿಂದ ವೇದಿಕೆಯಲ್ಲಿ ಕಂಗೊಳಿಸಿದ್ದಾನೆ. ಅವರು ಸಹಾಯಕ ಎಂಜಿನಿಯರ್ ಆಗಿರುವ ರಕ್ಷಿತ್ ರಾವ್ ಮತ್ತು ಅಶ್ವಿನಿ ದಂಪತಿಯ ಪುತ್ರ.

ಆರು ವರ್ಷದ ವಯಸ್ಸಿನಲ್ಲಿ ಮಾಡೆಲಿಂಗ್‌ಗೆ ಪ್ರವೇಶಿಸಿದ್ದ ರುಶಭ್, ಇತ್ತೀಚೆಗೆ ಉತ್ತಮ ನೃತ್ಯಕೌಶಲ್ಯ ಮತ್ತು ಅಭಿನಯದಿಂದ ಗುರುತಿಸಿಕೊಂಡಿದ್ದಾನೆ. ಅವರು ಈಗಾಗಲೇ ಮೂರು ತುಳು ಚಲನಚಿತ್ರಗಳು ಮತ್ತು ಒಂದು ಕನ್ನಡ ಧಾರಾವಾಹಿಯಲ್ಲಿ ಬಾಲನಟನಾಗಿ ಯಶಸ್ವಿಯಾಗಿ ಅಭಿನಯಿಸಿದ್ದಾರೆ. ಈ ಮೂಲಕ ಅವರು ಕಿರುತೆರೆಯಲ್ಲಿಯೂ ತಮ್ಮ ಪ್ರಭಾವ ಬೀರುವುದರಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿ ಗೋವಾದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡು ಮಾತ್ರವಲ್ಲದೇ, ಇನ್ನು ಮೂರು ಪ್ರಮುಖ ಉಪಶೀರ್ಷಿಕೆಗಳನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net