ವಿಶೇಷ ರೈಲು ಸಂಚಾರ

VASCO NEW
Published on

ಹುಬ್ಬಳ್ಳಿ : ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಂಟಾಗುವ ಜನದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆ ವಲಯವು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ವಿುನಲ್ ಹಾಗೂ ವಾಸ್ಕೊ ನಿಲ್ದಾಣದ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ಪ್ರಾರಂಭಿಸಲು ನಿರ್ಧರಿಸಿದೆ.

ಈ ರೈಲು ಆ. 14ರಂದು ಸಂಜೆ 5.30ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ವಿುನಲ್​ನಿಂದ ಹೊರಟು, ಮಾರನೇ ದಿನ ಬೆಳಗ್ಗೆ 9.30ಕ್ಕೆ ವಾಸ್ಕೊ ನಿಲ್ದಾಣ ತಲುಪಲಿದೆ.

ಆ. 15ರಂದು ಮಧ್ಯಾಹ್ನ 2.30ಕ್ಕೆ ವಾಸ್ಕೊ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗಿನಜಾವ 5 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ವಿುನಲ್ ತಲುಪಲಿದೆ.

ಭಾಗಶಃ ರದ್ದು : ದೇವನೂರು, ಕಡೂರು, ಬಲ್ಲೆಕೆರೆ ಮತ್ತು ಬಿರೂರು ಯಾರ್ಡ್ ಮಾರ್ಗದಲ್ಲಿ ನಡೆದಿರುವ ಕಾಮಗಾರಿ ಹಿನ್ನೆಲೆಯಲ್ಲಿ ವಿವಿಧ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಆ. 14, 15, 16, 18, 23, 24 ಮತ್ತು 28ರಂದು ಅರಸಿಕೆರೆ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರ ಅರಸಿಕೆರೆ-ಬಿರೂರ ಮಧ್ಯೆ ರದ್ದಾಗಲಿದ್ದು, ಬಿರೂರಿನಿಂದ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ. ಆ. 21ರಂದು ಅರಸಿಕೆರೆ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರ ಅರಸಿಕೆರೆ-ನಾಗವಂಗಲ ಮಧ್ಯೆ ರದ್ದಾಗಲಿದ್ದು, ಈ ರೈಲು ನಾಗವಂಗಲ ನಿಲ್ದಾಣದಿಂದ ಸಂಚಾರ ಪ್ರಾರಂಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net