

ಹುಬ್ಬಳ್ಳಿ: ದೇಶಪಾಂಡೆ ಸ್ಟಾರ್ಟ್‌ಪ್‌ಗಳ ಸಹಯೋಗದಲ್ಲಿ ನಗರದ ಇನ್‌ಸ್ಟಿಟ್ಯೂಟ್ ಆಫ್ ಎಕ್ಸ್‌ಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್ ಎಂಬಿಎ ಕಾಲೇಜ್‌ನಲ್ಲಿ ವ್ಯಾಪಾರ ಯೋಜನೆ ಸ್ಪರ್ಧೆ ಬಿ-ಐಡಿಯಾಟಿಕ್ -2024 ಸೋಮವಾರ ಏರ್ಪಡಿಸಲಾಗಿತ್ತು.
ಸಮರ್ಥ ಬಯೋಟೆಕ್ ಪೈ.ಲಿ. ಹುಬ್ಬಳ್ಳಿಯ ನಿರ್ದೇಶಕ ರಿತೇಶ ಸಾನು ಉದ್ಘಾಟಿಸಿ ಮಾತನಾಡಿ, ಜೀವನದ ಪ್ರತಿಯೊಂದು ರಂಗದಲ್ಲೂ ಆವಿಷ್ಕಾರ ಮತ್ತು ಸೃಜನಶೀಲತೆಯ ಸಂಸ್ಕೃತಿಯ ಅಗತ್ಯವಿದೆ. ಗುರಿಯೆಡೆಗೆ ಸದಾ ಉತ್ಸಹದಿಂದ ಮುನ್ನಡೆಯಬೇಕು. ಉದ್ಯಮರಂಗದಲ್ಲಿನ ಸವಾಲುಗಳನ್ನು ಎದುರಿಸಬೇಕು ಎಂದರು.
ಪ್ರಾಧ್ಯಾಪಕಿ ಹಾಗೂ ಸಂಸ್ಥೆಯ ಸಲಹೆಗಾರ್ತಿ ಡಾ. ಪೂರ್ಣಿಮಾ ಚರಂತಿಮಠ ಅಧ್ಯಕ್ಷತೆ ವಹಿಸಿ, ಇಂತಹ ಕಾರ್ಯಕ್ರಮ ನಡೆಸುವುದರ ಉದ್ದೇಶದ ಬಗ್ಗೆ ಪ್ರಸ್ತಾಪಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನವನ್ನು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಜೆಎಸ್‌ಎಸ್ ಎಸ್‌ಎಂಇ ಯುಜಿ ಮತ್ತು ಪಿಜಿ ಅಧ್ಯಯನ ಕೇಂದ್ರ ವಿದ್ಯಾಗಿರಿ ಧಾರವಾಡ (ಜೆಎಸ್‌ಎಸ್ ಬಿಬಿಎ ) (ದ್ವಿತೀಯ), ಹುಬ್ಬಳ್ಳಿಯ ಜೈನ್ ಪದವಿ ಕಾಲೇಜ್ (ತೃತೀಯ) ಮತ್ತು ಹುಬ್ಬಳ್ಳಿಯ ಕೆಎಲ್‌ಇ ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್‌ಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ದೇಶಪಾಂಡೆ ಸ್ಟಾರ್ಟ್‌ಪ್‌ಗಳ ಉಪನಿರ್ದೇಶಕ ಅಮೃತ ಪಾಟೀಲ ಬಹುಮಾನ ವಿತರಿಸಿದರು. ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಸ್ವಾಗತಿಸಿದರು. ಶಾರದಾ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಪ್ರೊ. ವಿಶಾಲ್ ಪಾಟೀಲ ಮತ್ತು ಪ್ರೊ. ಶಕ್ತಿ ಆನಂದ ಚಿಕ್ಕೂರ ಸಂಯೋಜಿಸಿದರು.