ಏತ ನೀರಾವರಿ ಕೇಂದ್ರದಿಂದ ನೀರು ಹರಿಸಿ

mkg
Published on

ನ್ಯಾಮತಿ: ಹನುಮಸಾಗರ ಏತ ನೀರಾವರಿ ಕೇಂದ್ರದಿಂದ ನೀರು ಹರಿಸುವ ಮೂಲಕ ಶಾಸಕರು ರೈತರ ಸಂಕಷ್ಟಕ್ಕೆ ಧಾವಿಸುವಂತೆ ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಬೆಳಗುತ್ತಿ ಬಿ.ಎಚ್. ಉಮೇಶ್ ಒತ್ತಾಯಿಸಿದರು.

ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತಾಲೂಕಿನಾದ್ಯಂತ ಮಳೆ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿದೆ. ಕೃಷಿಕರು ಬೀಜ ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗಾಗಿ ಸಾವಿರಾರು ರೂ. ಸಾಲ ಮಾಡಿ ಸಂಕಷ್ಟದಲ್ಲಿದ್ದಾರೆ ಎಂದರು.

ಹನುಮಸಾಗರ ಏತ ನೀರಾವರಿಯ ವಿದ್ಯುತ್ ಪ್ರಾಯೋಗಿಕ ಕೆಲಸ ಮಾತ್ರ ಬಾಕಿ ಇದ್ದು, ಶಾಸಕರು ತಕ್ಷಣ ಅಧಿಕಾರಿಗಳಿಗೆ ಒತ್ತಡ ಹಾಕಿ ಪ್ರಯೋಗಿಕ ಕೆಲಸ ಪೂರ್ಣಗೊಳಿಸಿ ನೀರು ಬಿಡುವಂತೆ ತಾಕೀತು ಮಾಡಬೇಕು ಎಂದು ಒತ್ತಾಯಿಸಿದರು.

ತಕ್ಷಣ ನೀರು ಹರಿಸಿದಲ್ಲಿ ತಾಲೂಕಿನ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಯಲಿದ್ದು, ರೈತರ ಒಂದಿಷ್ಟು ಬೆಳೆ ಉಳಿಸಲು ಸಹಕಾರಿ ಆಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net