Pushpa-2 ಸಿನಿಮಾ ನೋಡುವ ಆತುರ; ಕರ್ನಾಟಕದಲ್ಲಿ ರೈಲಿಗೆ ಸಿಲುಕಿ ಯುವಕ ಸಾವು

Pushpa 2
Published on

ಚಿಕ್ಕಬಳ್ಳಾಪುರ: ಐಕಾನ್​ ಸ್ಟಾರ್​ ಅಲ್ಲು ಅರ್ಜುನ್-ರಶ್ನಿಕಾ ಮಂದಣ್ಣ ನಟನೆಯ ಪುಷ್ಪ-2 ದಿ ರೂಲ್​ (Pushpa-2 The Rule) ಚಿತ್ರವು ಇಂದು (ಡಿಸೆಂಬರ್​ 05) ವಿಶ್ವದಾದ್ಯಂತೆ ತೆರೆ ಕಂಡಿದ್ದು, ಚಿತ್ರ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಇನ್ನೂ ಪುಷ್ಪ-2 (Pushpa-2) ಚಿತ್ರವನ್ನು ನೋಡಲು ಫ್ಯಾನ್ಸ್​ ಮುಗಿಬೀಳುತ್ತಿದ್ದು, ಅವಘಡಗಳು ಸಂಭವಿಸುತ್ತಿವೆ. ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಿನಿಮಾ ನೋಡಲು ಹೋಗಿದ್ದ ವೇಳೆ ಅವಘಡ ಒಂದು ಸಂಭವಿಸಿದ್ದು, ಅಭಿಮಾನಿಯೊಬ್ಬರು ಮೃತಪಟ್ಟಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಫ್ಯಾನ್​ ಶೋ ಕಾರ್ಯಕ್ರಮದ ವೇಳೆ ಕಾಲ್ತುಳಿದ ಸಂಭವಿಸಿ ರೇವತಿ (39) ಎಂಬುವವರು ಮೃತಪಟ್ಟಿದ್ದರು. ದುರ್ಘಟನೆಯಲ್ಲಿ ಆಕೆಯ 9 ವರ್ಷದ ಮಗ ತೇಜ್ ಹಾಗೂ 7 ವರ್ಷದ ಸಾನ್ವಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ದೊಡ್ಡಬಳ್ಳಾಪುರದಲ್ಲೂ ಇದೇ ರೀತಿಯ ಘಟನೆ ನಡೆದಿದೆ.

ಅಭಿಮಾನಿಯೊಬ್ಬ ಪುಷ್ಪ-2 (Pushpa-2) ಸಿನಿಮಾ ನೋಡಲು ಆತುರುತುರವಾಗಿ ಹೋಗುತ್ತಿದ್ದಾಗ ರೈಲಿಗೆ ಸಿಲುಕಿ ಮೃತಪಟ್ಟಿದ್ಧಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ ಮೂಲದ ಯುವಕ ಪ್ರವೀಣ್​ (19) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು, ಈತ ಬ್ಯಾಂಕ್ ಸರ್ಕಲ್ ಬಳಿಯ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.

ಬಿಡುಗಡೆಯಾದ ಪುಷ್ಪ 2 (Pushpa-2) ಸಿನಿಮಾ ನೋಡಲು ಬೆಳಗ್ಗೆ ಗೆಳೆಯರೊಂದಿಗೆ ವೈಭವ್​ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲು ತೆರಳುತ್ತಿದ್ದರು. ಬಾಶೆಟ್ಟಿ ಹಳ್ಳಿ ಬಳಿ ರೈಲ್ವೆ ಹಳಿ ದಾಟುತ್ತಿದ್ದಾಗ ಎರಡು ರೈಲುಗಳು ಏಕಕಾಲದಲ್ಲಿ ಆಗಮಿಸಿದ್ದು‌, ಇದನ್ನರಿಯದ ಪ್ರವೀಣ್ ರೈಲುಗಳ ಮಧ್ಯ ಸಿಲುಕಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಹೊರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net