ಹನೂರಿನಲ್ಲಿ ಬಸ್ ಏರಲು ನೂಕುನುಗ್ಗಲು

01 HANUR 2
ಹನೂರು ಸಮೀಪದ ಮಂಗಲ ಗ್ರಾಮದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಹಾಗೂ ಜನರು ನೂಕು ನುಗ್ಗಲಿನಲ್ಲೇ ಖಾಸಗಿ ಬಸ್ ಏರಿ ತೆರಳಿದರು.
Published on

ಹನೂರು: ಯುಗಾದಿ ಹಬ್ಬ ಮುಗಿಸಿ ಮಂಗಳವಾರ ಜನರು ಕೆಲಸ ಕಾರ್ಯಗಳ ನಿಮಿತ್ತ ಸ್ವ ಸ್ಥಾನಗಳಿಗೆ ಮರಳಲು ಆಗಮಿಸಿದ್ದರಿಂದ ನಿಲ್ದಾಣಗಳಲ್ಲಿ ಬಸ್ ಏರಲು ನೂಕುನುಗ್ಗಲು ಉಂಟಾಯಿತು.

ಉದ್ಯೋಗಕ್ಕಾಗಿ ತಮಿಳುನಾಡು, ಕೊಡಗು, ಮೈಸೂರು, ಬೆಂಗಳೂರು ಹಾಗೂ ಇನ್ನಿತರ ಕಡೆಗಳಿಗೆ ತೆರಳಿದ್ದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯುಗಾದಿ ಹಬ್ಬ ಆಚರಣೆಗೆ ಗ್ರಾಮಗಳತ್ತ ಮುಖ ಮಾಡಿದ್ದರು. ಮತ್ತೆ ಸ್ವ ಸ್ಥಾನಗಳಿಗೆ ತೆರಳಲು ಜನರು ಹಾಗೂ ಶಾಲಾ, ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಬೆಳಗಿನ ಜಾವ 5ರಿಂದ 8 ಗಂಟೆಯವರೆಗೆ ಆಗಮಿಸಿದ್ದರಿಂದ ಈ ಸಮಯದಲ್ಲಿ ನೂಕುನುಗ್ಗಲು ಉಂಟಾಯಿತು. ಜತೆಗೆ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಜನಸಂದಣಿ ಕಡಿಮೆಯಾದ ಬಳಿಕ ಎಂದಿನಂತೆ ಬಸ್‌ಗಳಲ್ಲಿ ಸಂಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net