

ತರಕಾರಿ ದರ ದುಪ್ಪಟ್ಟು: ಮಂಗಳೂರು ಸಹಿತ ಜಿಲ್ಲೆಯಲ್ಲಿ ಎರಡು ದಿನಗಳಿಂದ ತರಕಾರಿ, ಹಣ್ಣುಗಳ ದರ ದುಪ್ಪಟ್ಟಾಗಿದೆ. 28 ರೂ. ಇದ್ದ ಟೊಮ್ಯಾಟೊ ದರ 60 ರೂಪಾಯಿಗೆ ಏರಿಕೆಯಾಗಿದೆ. ಇದೇ ರೀತಿ ಬಟಾಟೆ 38ರಿಂದ 50ಕ್ಕೆ, ನೀರುಳ್ಳಿ 19ರಿಂದ 35ಕ್ಕೆ, ಕ್ಯಾರೆಟ್ 50ರಿಂದ 80ಕ್ಕೆ, ಸೋರೆಕಾಯಿ 18ರಿಂದ 40ಕ್ಕೆ, ಕ್ಯಾಪ್ಸಿಕಮ್ 80ರಿಂದ 150ಕ್ಕೆ, ಬೆಂಡೆ 22ರಿಂದ 40, ಹೀರೆಕಾಯಿ 42ರಿಂದ 65, ಬೀನ್ಸ್ 34ರಿಂದ 50, ಸೌತೆ 18ರಿಂದ 30, ಹಾಗಲಕಾಯಿ 63ರಿಂದ 100, ದಾಳಿಂಬೆ 105ರಿಂದ 150, ಮೂಸಂಬಿ 58ರಿಂದ 80, ಬಾಳೆ ಹಣ್ಣು ಕದಳಿ 65ರಿಂದ 80, ನೇಂದ್ರ 53ರಿಂದ 75, ಆ್ಯಪಲ್ 180ರಿಂದ 225 ರೂ.ಗೆ ಹೆಚ್ಚಳ ಕಂಡಿದೆ.
ಲಾಕ್‌ಡೌನ್ ಕಠಿಣ: ಈ ಬಾರಿಯ ಲಾಕ್‌ಡೌನ್ ಕಠಿಣವಾಗಿರಲಿದೆ. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬಂದರೆ ಪ್ರಕರಣ ದಾಖಲಿಸಲಾಗುತ್ತದೆ. ಪೊಲೀಸ್ ಅಧೀಕ್ಷಕರು ಹಾಗೂ ಆಯುಕ್ತರು ಎಲ್ಲ ಠಾಣಾಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿದ್ದು, ಕಾನೂನು ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.