ಕೊಲ್ಲೂರು ದೇವಳದಲ್ಲಿ ಭಕ್ತರ ಸಂದಣಿ

temple
Published on

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ವೈಭವದ ಶರನ್ನವರಾತ್ರಿ ಉತ್ಸವ ಅ.17ರಿಂದ ಆರಂಭಗೊಂಡಿದ್ದು, ಆರಂಭದ ದಿನಗಳಲ್ಲಿ ಕ್ಷೀಣವಾಗಿದ್ದರೂ ಶುಕ್ರವಾರ ಭಕ್ತರ ಸ್ತೋಮವೇ ನೆರೆದಿತ್ತು.

ಸಮಸ್ತ ಭಕ್ತರ ಅನುಕೂಲತೆಗೆ ಸಕಲ ಸೌಕರ್ಯ ಒದಗಿಸುವ ವ್ಯವಸ್ಥೆ ದೇವಾಲಯ ವತಿಯಿಂದ ಮಾಡಲಾಗಿದ್ದರೂ, ಭಕ್ತರು ಮಾತ್ರ ಸಾಮಾಜಿಕ ಅಂತರ ಪಾಲಿಸದೇ ನೂಕುನುಗ್ಗಲಿನಲ್ಲಿ ದೇವರ ದರ್ಶನ ಪಡೆದರು. ಕರೊನಾ ತಡೆಗಟ್ಟಲು ಮಾಸ್ಕ್ ಧಾರಣೆ ಹಾಗೂ ದೈಹಿಕ ಅಂತರ ಸೇರಿದಂತೆ ಇನ್ನಿತರ ನಿಯಮಗಳನ್ನು ಕಡ್ಡಾಯ ಮಾಡಿದ್ದರೂ, ನಿಯಮಗಳು ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಜನರು ವರ್ತಿಸುತ್ತಿರುವುದು ಕಂಡುಬಂತು.

ಕೊಲ್ಲೂರಿನಲ್ಲಿ ನವಮಿಯಂದು ರಾತ್ರಿ ಪುಷ್ಪ ರಥೋತ್ಸವ ನಡೆಯಲಿದ್ದು, ಈ ಬಾರಿ ಸಂಜೆ 5ರ ನಂತರ ಸಾರ್ವಜನಿಕರಿಗೆ ದೇವಾಲಯ ಪ್ರವೇಶ ನಿಷೇಧಿಸಲಾಗಿದೆ. 25ರ ವಿಜಯದಶಮಿಯಂದು ಪ್ರಾತಃಕಾಲ 4ರಿಂದ ವಿದ್ಯಾರಂಭ ನಡೆಯಲಿದ್ದು, ವಿದ್ಯೆ ಆರಂಭಿಸುವ ಮಗು, ತಂದೆ, ತಾಯಿಗೆ ಮಾತ್ರ ಅವಕಾಶ. ಸಂಜೆ ದೇವರ ವಿಜಯೋತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net