ಗ್ರಾಮಾಂತರ ವಾಲಿಬಾಲ್ ಪಂದ್ಯಾವಳಿ; ಸ್ವಪ್ನ ಮಾರ್ಟ್ ತಂಡ ಚಾಂಪಿಯನ್

MDK02
Published on

ಮಡಿಕೇರಿ: ಕಸಿನ್ಸ್ ಚೋಕ್ ಟಿಸಿ ಇವರ ಆಶ್ರಯದಲ್ಲಿ ನಲ್ವತ್ತೋಕ್ಲುವಿನಲ್ಲಿ ಆಯೋಜಿಸಿದ್ದ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಗ್ರಾಮಾಂತರ ವಾಲಿಬಾಲ್ ಪಂದ್ಯಾವಳಿಯಲ್ಲಿ ಸ್ಪಪ್ನಾ ಮಾರ್ಟ್ ಗುಂಡಿಕೆರೆ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದೆ.


ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಸ್ವಪ್ನಾ ಮಾರ್ಟ್ ತಂಡ ೨-೧ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಜೆಡ್.ವೈ.ಸಿ ಕೊಟ್ಟಮುಡಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು


ಇದಕ್ಕೂ ಮೊದಲು ನಡೆದ ಮೊದಲನೆಯ ಸೆಮಿಫೈನಲ್ ಪಂದ್ಯದಲ್ಲಿ ಸ್ವಪ್ನ ಮಾರ್ಟ್ ಹಾಗೂ ಡೆಕ್ಕನ್ ನಾಪೋಕ್ಲುವನ್ನು ೨-೧ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸಿಗ್ನೇಚರ್ ಬಾಣಂಗಾಲ ತಂಡವನ್ನು ಜೆಡ್.ವೈ.ಸಿ ಕೊಟ್ಟಮುಡಿ ತಂಡ ೨-೧ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತು.


ಪಂದ್ಯಾವಳಿಯ ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಸ್ವಪ್ನ ಮಾರ್ಟ್ ತಂಡದ ಸಿಯಾಬ್ ಗುಂಡಿಕೆರೆ, ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಅಮ್ಮಿ ಕೊಟ್ಟಮುಡಿ, ಬೆಸ್ಟ್ ಅಟೇಕರ್ ಸ್ವಪ್ನ ಮಾರ್ಟ್ ತಂಡದ ಸುಹೈಲ್ ಗುಂಡಿಕೆರೆ, ಹಾಗೂ ಬೆಸ್ಟ್ ಲಿಬ್ರೋ ಪ್ರಶಸ್ತಿಯನ್ನು ಡೆಕ್ಕನ್ ತಂಡದ ಚಿನ್ನು ಪಡೆದುಕೊಂಡರು. ಪಂದ್ಯಾವಳಿಯಲ್ಲಿ ಒಟ್ಟು ೩೦ ತಂಡಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net