ಗ್ರಾಮೀಣ ಕ್ರೀಡೆ ಉಳಿಸುವ ಕೆಲಸವಾಗಲಿ

Mdl Sports
ಮುದಗಲ್‌ನ ಮೇಗಳಪೇಟೆಯ ಶ್ರೀ ಗ್ಯಾನಪ್ಪಯ್ಯನ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಉದ್ಘಾಟಿಸಿದರು. ಪ್ರಮುಖರಾದ ಶಿವನಾಗಪ್ಪ, ನಂದಪ್ಪ ಕತ್ತಿ, ಗ್ಯಾನಪ್ಪ ಹೋಳ್ಯಾಚಿ, ಎಸ್ಡಿಎಂಸಿ ಅಧ್ಯಕ್ಷ ಮಾನಪ್ಪಯ್ಯ, ರಾಘು ಜಲ್ಲಿ ಇದ್ದರು.
Published on

ಮುದಗಲ್: ಅಧುನಿಕತೆ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆ, ಕಲೆ ಮಾಯವಾಗುತ್ತಿದೆ. ಅವುಗಳನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸವಾಗಬೇಕಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಹೇಳಿದರು.

ಪಟ್ಟಣದ ಮೇಗಳಪೇಟೆಯ ಶ್ರೀ ಗ್ಯಾನಪ್ಪಯ್ಯನ ಜಾತ್ರೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಿಂಗ್ರಾಣಿ ಕಲ್ಲು ಮತ್ತು ಗುಂಡು ಎತ್ತುವ ಸ್ಫರ್ಧೆ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಹಾಲುಮತ ಸಮಾಜದ ದೊಡ್ಡ ಜಾತ್ರೆಯಲ್ಲಿ ಹಿಂದಿನಿಂದಲೂ ಗ್ರಾಮೀಣ ಕ್ರೀಡೆ ಆಯೋಜಿಸುತ್ತ ಬರಲಾಗಿದೆ. ಟಗರಿನ ಕಾಳಗ, ರಾಸುಗಳಿಂದ ಕಲ್ಲು ಎಳೆಯುವ ಸ್ಪರ್ಧೆ ಹಾಗೂ ಸಿಂಗ್ರಾಣಿ ಕಲ್ಲು ಮತ್ತು ಗುಂಡು ಎತ್ತುವ ಸ್ಫರ್ಧೆ ನಡೆಯುತ್ತಿವೆ. ಸ್ಪರ್ಧಾಳುಗಳು ಸಹೋದರ ಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

ಮುಖಂಡರಾದ ಹೊಳಿಯಪ್ಪ, ಪರಮಾನಂದ, ಸಂಜೀವಪ್ಪ, ಮಾನಪ್ಪಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net