ಆಚರಣೆಯಲ್ಲಿ ವೈಜ್ಞಾನಿಕ, ಧಾರ್ಮಿಕ ಮನೋಭಾವ : ಮಹೇಶ್ ಸವಣೂರು ವಿಶ್ಲೇಷಣೆ

New Project (7)
Published on

ಕಡಬ: ಹಿರಿಯರ ಆಚರಣೆಯಲ್ಲಿ ವೈಜ್ಞಾನಿಕ, ಧಾರ್ಮಿಕ ಮನೋಭಾವ ಅಡಗಿತ್ತು. ಹಬ್ಬಗಳನ್ನು ಯುವ ಪೀಳಿಗೆ ಮುಂದುವರಿಸಬೇಕು. ಆಗ ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಸವಣೂರು ಹೇಳಿದರು.

ಸ್ನೇಹಿತರ ಬಳಗ ಕಲ್ಪಡ, ಮೂವಪ್ಪೆ ವತಿಯಿಂದ ದೀಪಾವಳಿ ಪ್ರಯುಕ್ತ ಆಯೋಜಿಸಿದ ಗ್ರಾಮೀಣ ಕ್ರೀಡಾಕೂಟ ಸಮಾರೋಪದಲ್ಲಿ ಮಾತನಾಡಿದರು.

ಶ್ರೀ ಕಾಣಿಯೂರು ಮಠದ ಮ್ಯಾನೇಜರ್ ಶ್ರೀನಿಧಿ ಆಚಾರ್ಯ, ಕೊಡಿಯಾಲ ಗ್ರಾ.ಪಂ. ಅಧ್ಯಕ್ಷ ಹರ್ಷನ್ ಕೆ.ಟಿ, ಧರ್ಮಸ್ಥಳ ಗ್ರಾ.ಯೋ. ಮೇಲ್ವಿಚಾರಕಿ ವಿಶಾಲ, ಕಾಣಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಹರ್ಷಿತ್ ನಿಡ್ಡಾಜೆ, ಬಳಗದ ಗೌರವಾಧ್ಯಕ್ಷ ಶಿವರಾಮ ಉಪಾಧ್ಯಾಯ ಉಪಸ್ಥಿತರಿದ್ದರು.

ಬಳಗದ ಅಧ್ಯಕ್ಷ ಯುವರಾಜ ಕಲ್ಪಡ ಅಧ್ಯಕ್ಷತೆ ವಹಿಸಿದ್ದರು. ಕೇಶವ ಕೆ.ಪಿ. ಸ್ವಾಗತಿಸಿದರು. ಜಗದೀಶ್ ಅಂಗಾರಡ್ಕ ವಂದಿಸಿದರು. ಹರೀಶ್ ಕಲ್ಪಪಣೆ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನೆ: ಬೆಳಗ್ಗೆ ಪ್ರಗತಿಪರ ಕೃಷಿಕ ಕಾಂತಪ್ಪ ಗೌಡ ಕಲ್ಪಡ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಮುಖ್ಯಶಿಕ್ಷಕ ನಾರಾಯಣ ಭಟ್, ಕಲ್ಲಗದ್ದೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ, ಎಸ್‌ಡಿಎಂಸಿ ಅಧ್ಯಕ್ಷ ಶೇಷಪ್ಪ ಗೌಡ ಕಲ್ಪಡಗುತ್ತು, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ

ನಿವೃತ್ತ ಸೈನಿಕ ಸುಬೇದಾರ್ ರವಿಚಂದ್ರ ಮಾರ್ಕಜೆ, ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಯತೀಶ್ ರೈ ಕುಕ್ಕುಮಜಲು, ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಮೋಹಿನಿ ಮಾಳ, ನಿವೃತ್ತ ಅಂಚೆಪಾಲಕ ಅಶೋಕ್ ಪೈ ಬಾಚೋಡಿ, ಶೈಕ್ಷಣಿಕ ಸಾಧಕರಾದ ಶಮಂತ್ ಉಪಾಧ್ಯಾಯ, ಶುಶಾಂತ್, ಆದ್ಯ ರೈ, ಕೀರ್ತಿ ಪೋಳಾಜೆ ಅವರನ್ನು ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net