

ಗುರುಪುರ: ಉಳಾಯಿಬೆಟ್ಟು ಗ್ರಾಪಂ, ಊರಿನ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜ.19ರಂದು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಎದುರು ಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ-2025 ನಡೆಯಿತು.
ಉಳಾಯಿಬೆಟ್ಟು ಪಂಚಾಯಿತಿ ಅಧ್ಯಕ್ಷ ಹರಿಕೇಶ ಶೆಟ್ಟಿ ಕ್ರೀಡಾಕೂಟ ಉದ್ಘಾಟಿಸಿದರು. ಮಂಗಳೂರಿನ ಕೆನರಾ ರೀಜಿನಲ್ ಬ್ಯಾಂಕ್ ಪ್ರಬಂಧಕ ಉಮಾಶಂಕರ್ ಪ್ರಸಾದ್, ಗುರುಪುರ ಕೆನರಾ ಬ್ಯಾಂಕ್ ಶಾಖೆ ಪ್ರಬಂಧಕ ಅಮಿತ್ ಅಶ್ವತಿ, ಪಂಚಾಯಿತಿ ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಸದಸ್ಯರಾದ ವಿಶ್ವನಾಥ ಶೆಟ್ಟಿ, ಉಮರ್ ಫಾರೂಕ್, ಮಮತಾ ಎಸ್, ಮುಹಮ್ಮದ್ ಅಜರುದ್ಧಿನ್, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು, ಉಳಾಯಿಬೆಟ್ಟು ಸರ್ಕಾರಿ ಶಾಲೆ ಶಿಕ್ಷಕ ಚೇತನ್ ಕೊಪ್ಪ, ಪೆರ್ಮಂಕಿಯ ಅಂಬೇಡ್ಕರ್ ವಸತಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕರಾದ ಶಶಿರಾಜ, ಶಶಿಕಲಾ ಉಪಸ್ಥಿತರಿದ್ದರು.
ಪಿಡಿಒ ಅನಿತಾ ವಿ.ಕ್ಯಾಥರಿನ್ ಸ್ವಾಗತಿಸಿದರು. ಪಂಚಾಯಿತಿ ಸಿಬ್ಬಂದಿ ನವೀನ್ ಕುಮಾರ್ ನಿರೂಪಿಸಿದರು. ಕ್ರೀಡಾಕೂಟದಲ್ಲಿ 6 ವಿಭಾಗಗಳಲ್ಲಿ 12ಕ್ಕೂ ಹೆಚ್ಚು ಆಟಗಳ ಸ್ಪರ್ಧೆ ಆಯೋಜಿಸಲಾಗಿತ್ತು.