ಗ್ರಾಮೀಣ ಕ್ರೀಡಾಕೂಟದಲ್ಲಿ ಮಿಂದೆದ್ದ ಸ್ಪರ್ಧಾಳುಗಳು

19 HRS 06
ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ನಡೆದ ಹಗ್ಗ-ಜಗ್ಗಾಟ ಎಲ್ಲರ ಗಮನ ಸೆಳೆಯಿತು.
Published on

ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿಯ 93ನೇ ವರ್ಷದ ಬೃಹತ್ ದನಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಗುರುವಾರ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಮಹಿಳೆಯರಿಗೆ ರಂಗೋಲಿ, ಮ್ಯಾರಥಾನ್ ಓಟ, ಮೂಸಿಕಲ್ ಚೇರ್ ಮತ್ತು ಪುರುಷರಿಗೆ ಮ್ಯಾರಥಾನ್ ಓಟ, ಹಗ್ಗ ಜಗ್ಗಾಟ ಹಾಗೂ ಸ್ಲೋ ಬೈಸಿಕಲ್ ರೇಸ್ ನಡೆಯಿತು.

ಪುರುಷರ ಮ್ಯಾರಥಾನ್ ಓಟದಲ್ಲಿ ಬೂಕನಬೆಟ್ಟದ ಶ್ರೀನಿವಾಸ್ ಮೂರ್ತಿ-ಪ್ರಥಮ, ಬೂಕ ಗ್ರಾಮದ ಗುರುಕಿರಣ್ ಎಸ್.ಗೌಡ-ದ್ವೀತಿಯ ಹಾಗೂ ಅಪ್ಪು ತೃತೀಯ ಸ್ಥಾನ ಪಡೆದರು. ಕಿರಿಯರ ವಿಭಾಗದಲ್ಲಿ ಬೂಕನಬೆಟ್ಟದ ದಿಗಂತ್-ಪ್ರಥಮ, ಸೋರೇಕಾಯಿಪುರದ ನಿಖಿಲ್‌ಗೌಡ-ದ್ವೀತಿಯ ಹಾಗೂ ಅರಕೆರೆ ಗ್ರಾಮದ ಮನೋರಂಜನ್ ತೃತೀಯ ಸ್ಥಾನಕ್ಕೆ ಪಡೆದರು.

ಸ್ಲೋ ಬೈಸಿಕಲ್ ರೇಸ್‌ನಲ್ಲಿ ಬೂಕ ಗ್ರಾಮದ ವಿವೇಕ್-ಪ್ರಥಮ, ಹೇಮಂತರಾಜ್-ದ್ವೀತಿಯ ಹಾಗೂ ಕಾರ್ತಿಕ್ ತೃತೀಯ ಸ್ಥಾನಕ್ಕೆ ಪಡೆದರು. ಹಗ್ಗ-ಜಗ್ಗಾಟದಲ್ಲಿ ಹಿರೀಸಾವೆಯ ಮಾರುತಿ ಪಿಟನೆಸ್‌ನ ಶಿವು ತಂಡ-ಪ್ರಥಮ ಹಾಗೂ ಬೂಕನಬೆಟ್ಟದ ದೀಪಕ್ ತಂಡ-ದ್ವೀತಿಯ ಸ್ಥಾನದೊಂದಿಗೆ ಬಹುಮಾನ ಗಳಿಸಿದರು.

ಮಹಿಳಾ ವಿಭಾಗದಲ್ಲಿ ಬೂಕದ ದಿಶಾ-ಪ್ರಥಮ, ಹಿರೀಸಾವೆಯ ಸುಶ್ಮಿತಾ-ದ್ವಿತೀಯ ಹಾಗೂ ಮಂಜುಳಾ ತೃತೀಯ ಸ್ಥಾನ ಗಿಟ್ಟಿಸಿಕೊಂಡರು. ರಂಗೋಲಿ ಸ್ಪರ್ಧೆಯಲ್ಲಿ ಹಿರೀಸಾವೆಯ ಅಮೂಲ್ಯಾ-ಪ್ರಥಮ, ಕಾವ್ಯ-ದ್ವೀತಿಯ ಹಾಗೂ ಶೀಲಾ ತೃತೀಯ ಸ್ಥಾನ ಪಡೆದು ಬಹುಮಾನ ಗಳಿಸಿದರು.
ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಬೂಕನಬೆಟ್ಟದ ಭವ್ಯಾ-ಪ್ರಥಮ, ಚನ್ನರಾಯಪಟ್ಟಣದ ಚಾಮುಂಡೇಶ್ವರಿ ಮಹಿಳಾ ಸಂಘದ ಸದಸ್ಯೆ ಸಾವಿತ್ರಮ್ಮ-ದ್ವಿತೀಯ ಹಾಗೂ ಕಾವಲು ಹೊಸೂರು ಗ್ರಾಮದ ಶೀಲಾ ತೃತಿಯ ಸ್ಥಾನ ಪಡೆದರು.

ದೈಹಿಕ ಶಿಕ್ಷಣ ಶಿಕ್ಷಕಿ ಪಾರ್ವತಮ್ಮ ನೇತೃತ್ವದಲ್ಲಿ ಹೋಬಳಿಯ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಸ್ಪರ್ಧೆಗಳನ್ನು ನಡೆಸಿಕೊಟ್ಟರು . ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಉಪ ತಹಸೀಲ್ದಾರ್ ತೇಜ್ವಸಿನಿ, ರಾಜಸ್ವ ನಿರೀಕ್ಷಕ ಯೋಗೇಶ್, ಗ್ರಾಮಲೆಕ್ಕಿಗರಾದ ಪಿ.ಎನ್.ಶೈಲಜಾ, ಸುಷ್ಮಿತಾ, ವಿ.ಜಿ.ನಂದನ್, ವಸಂತಲಕ್ಷ್ಮೀ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net