

ಕಾರವಾರ: ಮೊಬೈಲ್ ಗೀಳಿನಲ್ಲಿ ಗ್ರಾಮೀಣ ಕ್ರೀಡೆಗಳನ್ನೇ ಮರೆತಿರುವ ದಿನದಲ್ಲಿ ತಾಲೂಕಿನ ದೇವಳಮಕ್ಕಿಯಲ್ಲಿ ಇತ್ತೀಚೆಗೆ ಆಯೋಜಿಸಿದ ಕೆಸರುಗದ್ದೆ ಕ್ರೀಡಾಕೂಟ ಎಲ್ಲರ ಗಮನ ಸೆಳೆಯಿತು.
ಸತತ ಮೂರನೇ ವರ್ಷ ಕೆರವಡಿ, ದೇವಳಮಕ್ಕಿ, ವೈಲವಾಡ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗಾಗಿ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ನೂರಾರು ಜನರು ಆಟವಾಡಿ ಸಂಭ್ರಮಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಓಟ ಮತ್ತು ಚಮಚ-ಲಿಂಬೆಹಣ್ಣು ನಡಿಗೆ ಸ್ವರ್ಧೆ, ಪುರುಷರಿಗೆ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಏರ್ಪಡಿಸಲಾಗಿತ್ತು.
ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬ್ರಹ್ಮದೇವ ನಾಯ್ತಿವಾಡದ ದೀಪಕ ಹಳದೀಪುರ ತಂಡ ಚಾಂಪಿಯನ್, ದೇವಳಮಕ್ಕಿ ಬಾಯ್ಸ್ ರನ್ನರ್ ಆಫ್ ಆಗಿ ಹೊರ ಹೊಮ್ಮಿತು.ವಾಲಿಬಾಲ್ ಪಂದ್ಯಾವಳಿಯಲ್ಲಿ ನಿವಳಿ ಗ್ರಾಮದ ತಂಡ ಚಾಂಪಿಯನ್, ಕೋವೆಯ ನಾರಾಯಣ ತಂಡ ರನ್ನರ ಆಫ್ ಆಗಿ ಹೊರ ಹೊಮ್ಮಿತು.
ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ದೇವಳಮಕ್ಕಿ ಪಿಎಚ್ ಸಿ ವೈದ್ಯಾಧಿಕಾರಿ ಡಾ. ವನಶ್ರೀ ಕುಲಕರ್ಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಗೌಡ, ಸದಸ್ಯೆ ಪ್ರತಿಕ್ಷಾ ವೈಂಗಣಕರ, ಗ್ರಾಮಸ್ಥ ದೇವಿದಾಸ ದೇಸಾಯಿ, ಮರಿ ಗೌಡ, ಮೋಹನ ಕಾಣಕೋಣಕರ್, ಶಿವಾನಂದ ಕಾಣಕೂಣಕರ್, ರೂಪೇಶ್ ನಾಯ್ಕ, ಕೃಷ್ಣಾನಂದ ಕೊಳಂಬಕರ್, ಮಂಜುನಾಥ ಕೊಳಂಬಕರ್ ಇದ್ದರು.