

ಬೇಲೂರು : ಬೇಲೂರಿನ ನಿಸ್ವಾರ್ಥ ಗೆಳೆಯರ ಬಳಗದ ಪದಾಧಿಕಾರಿಗಳು ತಾಲೂಕಿನ ಮದಘಟ್ಟ ಗ್ರಾಮದ ಸಂತೇ ಕಾಲನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡೆ ಆಯೋಜಿಸುವ ಮೂಲಕ ಶುಕ್ರವಾರ ಕನ್ನಡ ರಾಜ್ಯೋತ್ಸವ ಆಚರಿಸಿದರು. ಈ ಸಂದರ್ಭ ಬಳಗದ ಅಧ್ಯಕ್ಷ ಹೇಮಂತ್ ಮಾತನಾಡಿ, ನಮ್ಮ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಹಗ್ಗ ಜಗ್ಗಾಟ ಸೇರಿದಂತೆ ಇತರೆ ಆಟಗಳನ್ನಾಡಿಸಿ ಮಕ್ಕಳನ್ನು ಪ್ರೋತ್ಸಾಹಿಸಿರುವುದು ಖುಷಿ ತಂದಿದೆ ಎಂದರು.
ಮಕ್ಕಳು ಉತ್ತಮ ವಿದ್ಯಾಭ್ಯಾಸದೊಂದಿಗೆ ನಾಳಿನ ಜವಾಬ್ದಾರಿಯುತ ಪ್ರಜೆಗಳಾಗಬೇಕು. ಪಾಲಕರು ಈ ಪ್ರಕ್ರಿಯೆಗೆ ನಿರಂತರ ಬೆಂಬಲಿಸಬೇಕು ಎಂದರು.
ಶಾಲೆ ಮುಖ್ಯೋಪಾಧ್ಯಾಯ ಭೋಜೇಗೌಡ ಮಾತನಾಡಿದರು. ಮುಖಂಡರಾದ ಪುರುಷೋತ್ತಮ, ಇಂದ್ರೇಶ್. ಸುದರ್ಶನ್, ಶ್ರೇಯಸ್, ರಾಜೇಶ್, ಅಕ್ಷಯ್, ಅಂಕಿತ್ ಹಾಗೂ ಸುಂದರೇಶ್ ಇತರರಿದ್ದರು.