ವೈದ್ಯಕೀಯ ಶಿಬಿರಗಳಿಂದ ಗ್ರಾಮೀಣರ ಸೇವೆ

aarogya shibira
ಆರೋಗ್ಯ ಉಚಿತ ಶಿಬಿರವನ್ನು ಕೋಟದ ವಿವೇಕ ಪ್ರೌಢ ಶಾಲಾ ನಿವೃತ್ತ ಪ್ರಾಂಶುಪಾಲೆ ಚಿತ್ರಾ ಕಾರಂತ ಉದ್ಘಾಟಿಸಿದರು.
Published on

ಕೋಟ: ಎಷ್ಟೋ ಕಡೆ ವೈದ್ಯಕೀಯ ಸೇವೆಗಾಗಿ ಬಹಳ ಕಷ್ಟ ಪಡಬೇಕಿದ್ದು, ಗೆಳೆಯರ ಬಳಗ ಕಾರ್ಕಡದಂತಹ ಗ್ರಾಮೀಣ ಪ್ರದೇಶದ ಸಾಮಾಜಿಕ ಸಂಸ್ಥೆ ಉಚಿತವಾಗಿ ಕ್ಯಾನ್ಸರ್‌ನಂತಹ ಕಾಯಿಲೆ ತಪಾಸಣಾ ಶಿಬಿರ ಏರ್ಪಡಿಸಿರುವುದು ಶ್ಲಾಘನಾರ್ಹ ಎಂದು ಕೋಟ ವಿವೇಕ ಪ್ರೌಢ ಶಾಲಾ ನಿವೃತ್ತ ಪ್ರಾಂಶುಪಾಲೆ ಚಿತ್ರಾ ಕಾರಂತ ಹೇಳಿದರು.

ಕಾರ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಸಂಬಂಧಿತ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಸಾಲಿಗ್ರಾಮ ಶ್ರೀಗುರು ನರಸಿಂಹ ದೇವಸ್ಥಾನ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಶುಭಾಶಂಸನೆಗೈದರು. ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಘವೇಂದ್ರ ರಾವ್ ಶಿಬಿರದ ಮಹತ್ವ ತಿಳಿಸಿದರು. ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲದ ಡಾ.ಸುಚರಿತ ಎಸ್. ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರಿನ ಪ್ರತಿನಿಧಿ ರಂಜನ್ ಉಪಸ್ಥಿತರಿದ್ದರು.

ಬಳಗದ ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಗದ ಜತೆ ಕಾರ್ಯದರ್ಶಿ ಶ್ರೀಕಾಂತ ಐತಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net