ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ

27 Raibag 1A photo-Web
ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಪಿಎಂ ಗ್ರಾಮ ಸಡಕ್ ಯೋಜನೆಯ ರಸ್ತೆ ಕಾಮಗಾರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು. ಶಾಸಕ ಡಿ.ಎಂ. ಐಹೊಳೆ, ಪಿ. ರಾಜೀವ, ನಿಂಗಪ್ಪ ಪಕಾಂಡಿ, ಬಸಗೌಡ ಪಾಟೀಲ, ಅಣ್ಣಾಸಾಹೇಬ ಖೆಮಲಾಪುರೆ ಇತರರು ಇದ್ದರು.
Published on

ರಾಯಬಾಗ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ರಾಯಬಾಗ ಮತ್ತು ಕುಡಚಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ಭಾಗದ ರಸ್ತೆಗಳನ್ನು ಸುಧಾರಿಸಲಾಗುತ್ತಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ತಾಲೂಕಿನ ನಿಡಗುಂದಿ ಗ್ರಾಮದಿಂದ ಬ್ಯಾಕೂಡ ಗ್ರಾಮದವರೆಗೆ 5 ಕೋಟಿ ರೂ. ವೆಚ್ಚದಲ್ಲಿ 6.62 ಕಿ.ಮೀ. ರಸ್ತೆ ಸುಧಾರಣೆ ಮತ್ತು ರಾಯಬಾಗ ಅಂಬೇಡ್ಕರ್ ನಗರದಿಂದ ಜಲಾಲಪುರ, ಭಿರಡಿ ಗ್ರಾಮದವರೆಗೆ 6.79 ಕೋಟಿ ರೂ.ವೆಚ್ಚದಲ್ಲಿ 9.19 ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಜತೆಗೂಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಅನುದಾನ ತಂದು ರಾಯಬಾಗ ಮತಕ್ಷೇತ್ರದಲ್ಲಿ ನೀರಾವರಿ ಮತ್ತು ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಶಾಸಕ ಪಿ. ರಾಜೀವ, ಜಿ.ಪಂ. ಸದಸ್ಯ ನಿಂಗಪ್ಪ ಪಕಾಂಡಿ, ಬಸಗೌಡ ಪಾಟೀಲ, ಅಣ್ಣಾಸಾಹೇಬ ಖೆಮಲಾಪುರೆ, ಲಕ್ಷ್ಮಣ ಗವಾನಿ, ವಿಲಾಸ ಹೆರವಾಡೆ, ಅಪ್ಪು ಹಳಾಜೆ, ರಾಮಾ ಹಿರೇಕೊಡಿ, ಗೋರಕನಾಥ ನಾಯಿಕ, ರಾಮಚಂದ್ರ ನಿಶಾನಂದಾರ, ಇಇ ಎಸ್.ಎಮ್.ಮೇಟಿ, ಎಇಇ ಎಸ್.ಬಿ. ವಲ್ಯಾಪುರಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net