

ಬೆಳಗಾವಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3ರ ಅಡಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 155 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 998 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ನೀಲಮ್ಮ ದೇವಸ್ಥಾನ-ಮುರ್ಕಿಬಾವಿ-ಮುತ್ವಾಡ್ ನಡುವಿನ 8.8 ಕಿ.ಮೀ. ರಸ್ತೆಗೆ 637.18 ಲಕ್ಷ ರೂ., ಜಮ್ಲಾಪುರ ಟಿ. ಶೀಗಿಹಳ್ಳಿಯ 6.01 ಕಿ.ಮೀ. ರಸ್ತೆಗೆ 479.21 ಲಕ್ಷ ರೂ., ಮುಗಾಬಸವ ಬೂದಿಹಾಳ-ಬೆಲವಾಡಿ 9.40 ಕಿ.ಮೀ. ರಸ್ತೆ ನಿರ್ಮಾಣಕ್ಕೆ 682.74 ಲಕ್ಷ ರೂ. ಬಿಡುಗಡೆಯಾಗಿದೆ. ರಾಮದುರ್ಗ ತಾಲೂಕಿನ ಕಟಕೋಳನಿಂದ ಎಂ. ಚಂದರಗಿನ 6.00 ಕಿ.ಮೀ. ರಸ್ತೆಗೆ 436.22 ಲಕ್ಷ ರೂ., ಚಿಪ್ಪಲಕಟ್ಟಿಯಿಂದ ತೋಂಡಿಕಟ್ಟಿವರೆಗೆ 6.00 ಕಿ.ಮೀ. ರಸ್ತೆಗೆ 460.01 ಲಕ್ಷ ರೂ., ಹೊಸೂರಿನಿಂದ ಎಸ್‌ಎಚ್-14 6.66 ಕಿ.ಮೀ. ರಸ್ತೆಗೆ 467.90 ಲಕ್ಷ ರೂ., ಸಂಚಗಾಂವನಿಂದ ಪೊಡಾನೂರ ರಸ್ತೆ, ಗುಡಮಾನಳ್ಳ-ಸಂಚಗಾಂವ ನಡುವಿನ 11.03 ಕಿ.ಮೀ. ರಸ್ತೆಗೆ 809.83 ಲಕ್ಷ ರೂ. ಬಿಡಗಡೆಯಾಗಿದೆ. ಗೋಕಾಕ ತಾಲೂಕಿನ ಬೆಟಗೇರಿಯಿಂದ ಮೇಳವಂಕಿ ಗ್ರಾಮದ 11.60 ಕಿ.ಮೀ. ರಸ್ತೆಗೆ 912.76 ಲಕ್ಷ ರೂ., ವಡೆರಹಟ್ಟಿ ಗ್ರಾಮದಲ್ಲಿ 6.44 ಕಿ.ಮೀ. ರಸ್ತೆ 501.05 ಲಕ್ಷ ರೂ., ದುರದುಂಡಿ ಮೂಲಕ ಮಲ್ಲಾಪುರ ಪಿಜಿ- ಬಡಿಗವಾಡ ನಡುವಿನ 7.91 ಕಿ.ಮೀ. ರಸ್ತೆಗೆ 576.51 ಲಕ್ಷ ರೂ., ಕುಂದರಗಿಯಿಂದ ಗುಜನಾಳ 6.95 ಕಿ.ಮೀ. ರಸ್ತೆಗೆ 505.82 ಲಕ್ಷ ರೂ. ಬಿಡುಗಡೆ ಆಗಿದೆ. ಬೆಳಗಾವಿ ತಾಲೂಕಿನ ಕುರಬರಹಟ್ಟಿ ಮೂಲಕ ಬಸ್ತವಾಡದಿಂದ ಹಲಗಾದ 5.53 ಕಿ.ಮೀ. ರಸ್ತೆಗೆ 291.78 ಲಕ್ಷ ರೂ., ತಾರಿಹಾಳದಿಂದ ಬಾಗೇವಾಡಿ 4.10 ಕಿ.ಮೀ. ರಸ್ತೆಗೆ 294.51 ಲಕ್ಷ ರೂ., ಹಂಗರಗಾದಿಂದ ಕಲ್ಲೆಹೊಳ 6.3 ಕಿ.ಮೀ. ರಸ್ತೆಗೆ 270.06 ಲಕ್ಷ ರೂ. ಬಿಡುಗಡೆ ಆಗಿದೆ. ಸವದತ್ತಿ ತಾಲೂಕಿನ ಮುರುಗೋಡದಿಂದ ಹಾರುಗೊಪ್ಪ 5.53 ಕಿ.ಮೀ. ರಸ್ತೆಗೆ 437.38 ಲಕ್ಷ ರೂ., ದುಂಡನಕೊಪ್ಪ-ಹೊಸೂರ 5.17 ಕಿ.ಮೀ. ರಸ್ತೆಗೆ 394.37 ಲಕ್ಷ ರೂ., ಹೂಲಿಯಿಂದ ಚಿಕ್ಕುಂಬಿ ಮೂಲಕ ಹಂಚಿನಾಳ 12.75 ಕಿ.ಮೀ. ರಸ್ತೆಗೆ 1003.46 ಲಕ್ಷ ರೂ., ಹಂಚಿನಾಳದಿಂದ ಆಚಮಟ್ಟಿಯ 5.78 ಕಿ.ಮೀ. ರಸ್ತೆಗೆ 405.26 ಲಕ್ಷ ರೂ., ಸತ್ತಿಗೇರಿಯಿಂದ ಗುಡಮಕೇರಿ ಮೂಲಕ ಯರಗಣವಿವರೆಗೆ 4.25 ಕಿ.ಮೀ. ರಸ್ತೆಗೆ 324.04 ಲಕ್ಷ ರೂ. ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
ಹಳ್ಳಿಗಳ ಸಮಗ್ರ ಅಭಿವೃದ್ಧಿಗಾಗಿ ಸಂಕಲ್ಪ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 155 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ 998 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.| ಸುರೇಶ ಅಂಗಡಿ ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ