ಆ.10ರಂದು ಗ್ರಾಮೀಣ ಅಂಚೆ ನೌಕರರ ಮುಷ್ಕರ

POST
Published on

ಮಂಗಳೂರು: ಗ್ರಾಮೀಣ ಅಂಚೆ ನೌಕರರ ಸಂಘ(ಎಐಜಿಡಿಎಸ್‌ಯು) ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ಬಾರಿ ಸರ್ಕಾರದ ಗಮನ ಸೆಳೆದರೂ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆ.10ರಂದು ದೇಶವ್ಯಾಪಿ ಮುಷ್ಕರ ಹಮ್ಮಿಕೊಳ್ಳಲು ತೀರ್ಮಾನಿಸಿದೆ.

ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿಯೂ ಅಂಚೆ ಕಚೇರಿ ನೌಕರರು ಕಚೇರಿಗೆ ಹಾಜರಾಗದೆ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಕನಿಷ್ಠ ವೇತನ, ಹೆಚ್ಚು ದುಡಿಮೆ, ಮೇಲಧಿಕಾರಿಗಳ ಕಿರುಕುಳದಿಂದ ನೌಕರರು ಬಳಲುತ್ತಿದ್ದಾರೆ. ನೌಕರರಿಗೆ ಸೂಕ್ತ ಉದ್ಯೋಗ ಭದ್ರತೆ ಹಾಗೂ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರೂ, ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂಘ ವತಿಯಿಂದ ದೇಶವ್ಯಾಪಿ-ವಿಭಾಗಮಟ್ಟದಲ್ಲಿ ಒಂದು ದಿನ ರಜೆ ಹಾಕಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಐಜಿಡಿಎಸ್‌ಯು ಅಧ್ಯಕ್ಷ ವಿಠ್ಠಲ್ ಎಸ್. ಪೂಜಾರಿ, ಕಾರ್ಯದರ್ಶಿ ಸುನಿಲ್ ದೇವಾಡಿಗ, ಖಜಾಂಚಿ ಕಮಲಾಕ್ಷ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net