ಗ್ರಾಮೀಣ ಆಟಗಳಲ್ಲಿ ಮಗ್ನರಾದ ಯುವಕರು

08ALD02
ಅಳವಂಡಿ ಶ್ರೀಮಾರುತೇಶ್ವರ ದೇವಸ್ಥಾನ ಹತ್ತಿರದ ನಾಗಪ್ಪನಿಗೆ ಮಹಿಳೆಯರು ಪೂಜೆ ಸಲ್ಲಿಸಿ ಹಾಲು ಎರೆಯುತ್ತಿರುವುದು.
Published on

ಅಳವಂಡಿ: ಶ್ರಾವಣ ಮಾಸದಲ್ಲಿ ಬರುವ ಪಂಚಮಿ ಹಬ್ಬವನ್ನು ಮೂರು ದಿನ ಮಹಿಳೆಯರು ಸಂಭ್ರಮದಿಂದ ಆಚರಿಸುವರು. ಮೊದಲನೇ ದಿನ ರೊಟ್ಟಿ ಪಂಚಮಿ, ಎರಡನೇ ದಿನ ನಾಗ ಚತುರ್ಥಿ, ಮೂರನೇ ದಿನ ನಾಗ ಪಂಚಮಿ, ಈ ದಿನಗಳಲ್ಲಿ ವಿವಿಧ ಬಗೆಯ ಸಿಹಿ ತಿಂಡಿಗಳನ್ನು ತಯಾರಿ ದೇವರಿಗೆ ನೈವೇದ್ಯ ಮಾಡುವರು.

ವಲಯ ವ್ಯಾಪ್ತಿ ಗ್ರಾಮಗಳಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಗುರುವಾರ ಮಹಿಳೆಯರು ದೇವರಿಗೆ ನೈವೇದ್ಯ ಮಾಡಿಕೊಂಡು ಗುಂಪು ಗುಂಪಾಗಿ ತೆರಳಿ ದೇವಸ್ಥಾನ ಹಾಗೂ ಮುಂತಾದ ಕಡೆಗಳಲ್ಲಿ ಪ್ರತಿಷ್ಠಾಪಿಸಿದ ನಾಗಪ್ಪನಿಗೆ ಕೊಬ್ಬರಿ ಬಟ್ಟಲಿನಿಂದ ಹಾಲು ಎರೆದು ಸಂಭ್ರಮಿಸಿದರು,

ನಂತರ ಮಕ್ಕಳು ಮಹಿಳೆಯರು, ಜೋಕಾಲಿ ಆಡಿದರು. ಯುವಕರು ಗ್ರಾಮೀಣ ಕ್ರೀಡೆಗಳಾದ ನಿಂಬೆಹಣ್ಣು ಎಸೆಯುವುದು, ಗುಂಡು ಕಲ್ಲು ಎತ್ತುವುದು, ಕಣ್ಣು ಕಟ್ಟಿಕೊಂಡು ದೇವಸ್ಥಾನ ಗಂಟೆ ಬಾರಿಸುವುದು, ಸೈಕಲ್ ಓಡಿಸುವುದು ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net