

ಕಂಪ್ಲಿ: ಎಲ್ಲ ಮಕ್ಕಳಿಗೆ ಸಮಾನವಾಗಿ ಶಿಕ್ಷಣ ನೀಡಬೇಕು ಎಂದು ದೇವಸಮುದ್ರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಎಚ್.ಶಕುಂತಲಾ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸ್ತ್ರೀಶಿಕ್ಷಣ ಇನ್ನಷ್ಟು ಸುಧಾರಿಸಬೇಕಿದೆ. ಮಹಿಳೆ ಪುರುಷರಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಬಲ್ಲಳು. ಮಕ್ಕಳಿಗೆ ಶಿಕ್ಷಣ, ಪೋಷಣೆ, ಸಂಸ್ಕಾರ, ಸೌಲಭ್ಯ ಕಲ್ಪಿಸುವಲ್ಲಿ ತಾರತಮ್ಯ ಮಾಡಬಾರದು ಎಂದರು.
ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸಕಲೇಶ್ವರಿ ಅಕ್ಕ ಮಾತನಾಡಿ, ಇಂದಿನ ಜೀವನ ಸಂಕೀರ್ಣ, ಜಟೀಲತೆ ಮತ್ತು ಒತ್ತಡಗಳಿಂದ ಕೂಡಿದೆ. ಇದರಿಂದ ಮನಸ್ಸು ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅರ್ಥಪೂರ್ಣ ಜೀವನ ಸಾಗಿಸಲು ರಾಜಯೋಗ ಶಿಕ್ಷಣ ಪಡೆಯಬೇಕು ಎಂದರು.
ಸಂಘದ ಅಧ್ಯಕ್ಷೆ ಸುನಿತಾ ಪೂಜಾರಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಶಿಕ್ಷಕರಾದ ಮಂಜುನಾಥ, ಲಕ್ಷ್ಮಣ, ಚಂದ್ರಯ್ಯ, ಭೂಮೇಶ್, ರೇಣುಕಾರಾಧ್ಯ, ರೇವಣ್ಣ, ಸೋಮಶೇಖರ್ ಪದಾಧಿಕಾರಿಗಳಾದ ನಾಗರತ್ನ ಅಗಳಿ, ರೂಪಕಲಾ, ಲತಾ, ಗುರುಸಿದ್ದಮ್ಮ, ಸುಮಿತ್ರಾ, ಸುನಿತಾ ಕುಮಾರಿ, ಜಿ.ಶಾಂತಾ, ಆರ್.ಎಚ್.ರೇಣುಕಾ, ಚನ್ನಬಸಮ್ಮ ಶೆಟ್ರು, ಗಂಗಮ್ಮ ಇತರರಿದ್ದರು.