ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಅಗತ್ಯ

3Athanigramin2
Published on

ಅಥಣಿ ಗ್ರಾಮೀಣ: ಕುಸ್ತಿ ಗ್ರಾಮೀಣ ಕ್ರೀಡೆಯಾಗಿದ್ದು, ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು. ಕುಸ್ತಿ ಪಟುಗಳು ಸ್ಪರ್ಧಾತ್ಮಕ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಶ್ರೀಸಂಗಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಜ್ಯಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮನೋದೈಹಿಕ ಬೆಳವಣಿಗೆ ವೃದ್ಧಿಯಾಗುತ್ತದೆ ಎಂದರು.

ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಮಾತನಾಡಿ, ಯುವ ಜನಾಂಗ ದುಶ್ಚಟದಿಂದ ದೂರವಿರಬೇಕು ಎಂದು ಹೇಳಿದರು. ಕಕಮರಿ ಗುರುದೇವ ಆಶ್ರಮದ ಆತ್ಮಾರಾಮ ಸ್ವಾಮೀಜಿ ಮಾತನಾಡಿದರು.

24 ಜೋಡಿ ಕುಸ್ತಿಗಳಲ್ಲಿ ಅಯೋಧ್ಯೆಯ ದಂಗಲ್ ಬಾಬಾ ಹಾಗೂ ಉತ್ತರ ಪ್ರದೇಶದ ಅಲಿ ವಿರುದ್ಧ ಜಯ ಸಾಧಿಸಿದರು. ಮೊದಲನೇ ಕುಸ್ತಿಯಲ್ಲಿ ಕೊಲ್ಲಾಪುರದ ಮೌಲಿ ಜಮದಾಳೆ ವಿರುದ್ಧ ಹರಿಯಾಣದ ಕೇಸರಿ ರೋಹಿಲ್ ಚೌಧರಿ ವಿರುದ್ಧ ಸಮಬಲ ಸಾಧಿಸಿದರು. ಶಿವಯ್ಯ ಪೂಜಾರಿ ವಿರುದ್ಧ ವಿಕಾಸ ದೋತರೆ ಅವರನ್ನು ಚಿತ್ತ ಮಾಡಿ ಶಿವಯ್ಯ ಪೂಜಾರಿ ದ್ವಿತೀಯ ಸ್ಥಾನ, ಕೋಹಳ್ಳಿ ಗ್ರಾಮದ ಭೀಮು ಕಾಟೆ ಅವರು ಸೋಲ್ಲಾಪುರದ ಪೈ.ಪ್ರತಾಪ್ ಅವರನ್ನು ಚಿತ್ತ ಮಾಡಿ ತೃತೀಯ ಸ್ಥಾನ ಪಡೆದುಕೊಂಡರು.

ಪ್ರಭುಲಿಂಗ ಸ್ವಾಮೀಜಿ, ಬಿ.ಬಿ. ಕುಂಬಾರ, ಮಲಗೌಡ ಝರೆ, ಸಂಗಯ್ಯ ಪೂಜಾರಿ, ಅಮೋಘಸಿದ್ದ ಖೊಬ್ರಿ, ಶಿವು ಗುಡ್ಡಾಪುರ, ಸದಾಶಿವ ಹರಪಾಳೆ, ನೂರಹ್ಮದ್ ಡೊಂಗರಗಾಂವ, ಪ್ರಲ್ಹಾದ ಪಾಟೀಲ, ಡಾ.ರವಿ ಮುದಗೌಡರ, ಮಲಗೌಡ ಪಾಟೀಲ, ಉಮ್ಮಯ್ಯ ಪೂಜಾರಿ, ಭರತ ಬಂಡಗರ, ಬೈರು ಬಿಜ್ಜರಗಿ, ಈರಗೌಡ ಪಾಟೀಲ, ತುಕಾರಾಮ ದೇವಖಾತೆ, ಗೌಡಪ್ಪ ಬಿರಾದಾರ, ಕೇದಾರಿ ವಳಸಂಗ, ಸಹದೇವ ಸೂರ್ಯವಂಶಿ, ಲಿಂಗರಾಜ ಮುಧೋಳ ಇತರರು ಇದ್ದರು.3-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net