ಗ್ರಾಮೀಣ ಭಾಗಕ್ಕೆ ನರೇಗಾ ಪೂರಕ

21 GVT 03
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಂಗಾವತಿ, ಕಾರಟಗಿ ತಾಲೂಕಿನ ನರೇಗಾ ಯೋಜನೆ ಪ್ರಗತಿಪರಿಶೀಲನಾ ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ವಿ.ಪ್ರಕಾಶ ಮಾತನಾಡಿದರು. ತಾಪಂ ಇಒ ಲಕ್ಷ್ಮೀದೇವಿ ಯಾದವ್, ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ವೈ.ವನಜಾ, ಜಿಪಂ ಎಡಿಪಿಸಿ ಮಹಾಂತಸ್ವಾಮಿ ಇತರರಿದ್ದರು.
Published on

ಗಂಗಾವತಿ: ವೈಯಕ್ತಿಕ ಕಾಮಗಾರಿ ನಿರ್ವಹಣೆಗೆ ನರೇಗಾ ಯೋಜನೆ ಪೂರಕವಾಗಿದ್ದು, ಪ್ರಸಕ್ತ ಸಾಲಿನ ಅರ್ಹ ಲಾನುಭವಿಗಳನ್ನು ಆಯ್ಕೆ ಮಾಡುವಂತೆ ಜಿಪಂ ಯೋಜನಾ ನಿರ್ದೇಶಕ ವಿ.ಪ್ರಕಾಶ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಂಗಾವತಿ ಮತ್ತು ಕಾರಟಗಿ ತಾಲೂಕಿನ ನರೇಗಾ ಯೋಜನೆ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ಸ್ಥಳೀಯ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ಕಡ್ಡಾಯವಾಗಿ 100 ಮಾನವ ದಿನಗಳ ಕೆಲಸ ನೀಡಬೇಕು. ವಿಧವೆಯರು, ನಿರ್ಗತಿಕರು, ವಿಕಲಚೇತನರನ್ನು ಗುರುತಿಸಿ ಅವರಿಗೆ ನರೇಗಾ ಸೌಲಭ್ಯ ಕಲ್ಪಿಸಬೇಕು. ನಾಲೆ ಹಾಗೂ ಹಳ್ಳದ ಹೂಳೆತ್ತುವುದು, ಗೋಕಟ್ಟೆ ನಿರ್ಮಾಣ, ಶಾಲಾ ಕಾಮಗಾರಿ, ಸಿಸಿ ರಸ್ತೆ, ಚರಂಡಿ, ನಮ್ಮ ಹೊಲ-ನಮ್ಮ ರಸ್ತೆ ಕಾಮಗಾರಿ ನಿರ್ವಹಿಸಬೇಕು.

ಪಿಡಿಒ, ಇಂಜಿನಿಯರ್‌ಗಳು ಮೇಲುಸ್ತುವಾರಿ ವಹಿಸಿಕೊಳ್ಳುವಂತೆ ಸಲಹೆ ನೀಡಿದರು. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನೀಡಿರುವ ಕಸ ವಿಲೇವಾರಿ ವಾಹನಗಳಿಂದ ಕಸ ಸಂಗ್ರಹಣೆ ಮತ್ತು ಗ್ರಾಮ ಸ್ವಚ್ಛತೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಶೇ.5 ಅನುದಾನ ವಿಕಲಚೇತನರ ಕಲ್ಯಾಣಕ್ಕೆ ಸಮರ್ಪಕ ಬಳಕೆ ಮಾಡಿ, ವಿವಿಧ ಯೋಜನೆಯಡಿ ವಿಕಲಚೇತನರು ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿ ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಪ್ರಗತಿಗೆ ಶ್ರಮಿಸುವಂತೆ ಸಲಹೆ ನೀಡಿದರು. ವಿಷಯ ನಿರ್ವಾಹಕ ರವೀಂದ್ರ ಕುಲಕರ್ಣಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net