ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಅವಶ್ಯಕ

29Huk1
Published on

ಹುಕ್ಕೇರಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಂಗ್ಲ ಮಾಧ್ಯಮ ಬೋಧನೆ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಗರಿಮೆ ಗುಡ್ ಶಪರ್ಢ್ ಆಂಗ್ಲ ಮಾಧ್ಯಮ ಶಾಲೆಗೆ ಸಲ್ಲುತ್ತದೆ ಎಂದು ಸಂಕೇಶ್ವರ ಮಿಷನ್ ಆಸ್ಪತ್ರೆಯ ಡಾ.ಅಲೆಕ್ಸಾಂಡರ್ ಹೇಳಿದರು.

ತಾಲೂಕಿನ ರಕ್ಷಿ ಗ್ರಾಮದ ಗುಡ್ ಶಪರ್ಢ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ವಾರ್ಷಿಕ ಕ್ರೀಡಾಕೂಟ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಅವರು, ಇಂಗ್ಲಿಷ್ ಭಾಷಾ ಕಲಿಕೆ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ ಎಂದರು.

ವರದಿಗಾರ ಬಾಬು ಸುಂಕದ, ಶಿರಗಾಂವ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಎ.ಐ.ಕೋಟಿವಾಲೆ, ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ವಿರೂಪಾಕ್ಷ ಜರಳಿ, ಅವರಗೋಳ ಸರ್ಕಾರಿ ಪ್ರಾಥಮಿಕ ಶಾಲೆಯ ಎಂ.ಎಂ.ರಡ್ಡಿ ಮಾತನಾಡಿ, ಗುಡ್ ಶಪರ್ಢ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ.ಸದಾನಂದ ಕುರಿ ಮಾತನಾಡಿದರು. ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಡಾ.ಅಲೆಕ್ಸಾಂಡರ್ ಅವರನ್ನು ಸನ್ಮಾನಿಸಲಾಯಿತು. ಶಾಲಾ ವ್ಯವಸ್ಥಾಪಕ ಕೃಷ್ಣಪ್ಪ ಬಿ., ಸರೋಜಾ ಕೌಜಲಗಿ, ಶಿಕ್ಷಕರಾದ ರಜನಿಕಾಂತ, ಮಧು, ಸರೋಜಿನಿ, ಅಕ್ಷತಾ ಪಿ., ರುತ್ ಸೊಪ್ಪಡ್ಲ, ಇರ್ಫಾನ್ ಜರ್ಮನ್, ಸ್ವಸ್ಥಿಕಾ ಮಿರಜಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net