ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಯತ್ನ

01
Published on

ಬೆಳಗಾವಿ: ಗ್ರಾಮೀಣ ಕ್ಷೇತ್ರದ ತುಮ್ಮರಗುದ್ದಿ, ಸೋಮನಟ್ಟಿ ಹಾಗೂ ಅರಳೀಕಟ್ಟಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳ ಮರು ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಮಳೆಯಿಂದ ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದು, ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮರುನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮೀಣ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ಹಾಕಿಕೊಳ್ಳಲಾಗುವುದು. ಈ ಕುರಿತು ಎಲ್ಲರ ಸಲಹೆ, ಸಹಕಾರ ಪಡೆಯಲಾಗುವುದು. ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶೇಖರ ಹೊಸೂರಿ, ಕಲ್ಲಪ್ಪ ಶಿಣಗಿ, ಕಲ್ಮೇಶ ಮಳಗಲಿ, ಶಿವಶಂಕರ ಪಾಟೀಲ, ಶಿವಾಜಿ ತಳವಾರ, ಶೇಖರ ಶಿಣಗಿ, ನಾಗರಾಜ ಹುಂಕಳಿ, ಲಕ್ಷ್ಮಣ ಕೆಂಪದಿನ್ನಿ, ಬಾಳಪ್ಪ ಯದ್ದಲಗುಡ್ಡ, ಮಂಜುನಾಥ ತೋಟಗಿ, ಬಾಳಪ್ಪ ಬಸರಿಮರದ, ಹೊಳೆಪ್ಪ ನಂದ್ಯಾಗೋಳ, ಬಾಳಪ್ಪ ಮಾಸ್ತಮರ್ಡಿ, ಮಲ್ಲೇಶ ಪೂಜೇರಿ, ಟೋಪಣ್ಣ, ಕಲ್ಲಪ್ಪ ಯದ್ದಲಗುಡ್ಡ, ಸಣ್ಣರಾಯಪ್ಪ, ನಿಂಗಪ್ಪ ಬಾಗೇವಾಡಿ, ಸಿದ್ದಣ್ಣ ಸಿಂಗಾಡಿ, ರಾಜು ಉಪ್ಪಾರ, ನಾಗರಾಜ ಕರಲಿಂಗನವರ, ರಮೇಶ ತಿಗಡಿ, ಗುರಪ್ಪ ಹೆಬ್ಬಾಳ್ಕರ್, ಚಂಬಣ್ಣ ಉಳ್ಳಾಗಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ದಾಸಪ್ಪಗೋಳ, ಗ್ರಾಮಗಳ ಹಿರಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net