ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ: ಸಚಿವೆ ಹೆಬ್ಬಾಳ್ಕರ್

LAXMI
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗೆ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಚಾಲನೆ ನೀಡಿದರು. ಯುವರಾಜ ಕದಂ, ಡಾಕಲು ಪಾಟೀಲ, ಮಾರುತಿ ಚೋಕುಲಕರ, ಪ್ರಕಾಶ ಹಜಗೋಳ್ಕರ ಇತರರಿದ್ದರು.
Published on

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಮೂಲಕ ಮಾದರಿ ಕ್ಷೇತ್ರ ಮಾಡಿದ್ದೇನೆ. ಈ ೇತ್ರವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಕೆಲಸ ಮಾಡಿರುವ ಆತ್ಮತೃಪ್ತಿ ಹೊಂದಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ತಿಳಿಸಿದರು.

ತಾಲೂಕಿನ ಧಾಮಣೆ (ಎಸ್​) ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

7 ವರ್ಷದಲ್ಲಿ ಬೆಳಗಾವಿ ಗ್ರಾಮೀಣ ೇತ್ರದ ಅಭಿವೃದ್ಧಿಯಲ್ಲಿ ಹೊಸ ಇತಿಹಾಸ ಬರೆದಿದ್ದೇನೆ. ನೂರಾರು ಶಾಲೆ, ಅಂಗನವಾಡಿ ಕೊಠಡಿ ನಿರ್ಮಾಣ, ದೇವಸ್ಥಾನ ಜೀಣೋರ್ದ್ಧಾರ, ಅಸಂಖ್ಯಾತ ರಸ್ತೆ ಅಭಿವೃದ್ಧಿ, ಅಪಾರ ಸಂಖ್ಯೆ ಸಮುದಾಯ ಭವನ ನಿರ್ಮಾಣ, ವಿವಿಧ ಮೂಲಭೂತ ಸೌಲಭ್ಯ ಸೃಷ್ಟಿದ್ದೇನೆ ಎಂದರು.

ಅಂದಾಜು 44.83 ಲ ರೂ. ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗುಣಮಟ್ಟ ಕಾಪಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇಡೀ ೇತ್ರದಲ್ಲಿ ತಾರತಮ್ಯವಿಲ್ಲದೆ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ. ಗ್ರಾಮಸ್ಥರ ಯಾವ ಬೇಡಿಕೆಯನ್ನೂ ರ್ನಿಲಸದೆ ಕೆಲಸ ಮಾಡಿಕೊಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದರು.

ಯುವರಾಜ ಕದಂ, ಡಾಕಲು ಪಾಟೀಲ, ಮಾರುತಿ ಚೋಕುಲಕರ, ಪ್ರಕಾಶ ಹಜಗೋಳ್ಕರ, ಗಾವಡು ಬೆಕ್ಕೆಹಾಳ್ಕರ, ಸೋಮಣ್ಣ ಪಾಟೀಲ, ಅಪ್ಪಾಜಿ ಪಾಟೀಲ, ಇಂಜಿನಿಯರ್​ ಕೇದಾರ, ಪತ್ತಾರ, ಶೇಗುನಸಿ, ಮನೋಹರ ಬೆಳಗಾಂವ್ಕರ ಇತರರಿದ್ದರು.

8 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಧಾಮಣೆ (ಎಸ್​)& ಹಜಗೂಳಿ ಮುಖ್ಯ ರಸ್ತೆಯಿಂದ ಧನಗರವಾಡಿ ಗ್ರಾಮವರೆಗಿನ ರಸ್ತೆಯ ಡಾಂಬರೀಕರಣದ ಕಾಮಗಾರಿ ಸೇರಿ ವಿವಿಧ 8 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ನಿಗದಿತ ಸಮದಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಸ್ಥಳಿಯರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕೆಲಸ ಮಾಡಬೇಕು ಎಂದು ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net