ಗ್ರಾಮೀಣ ಹಬ್ಬಗಳ ಪ್ರೋತ್ಸಾಹ ಅವಶ್ಯ

Rural festivals need to be encouraged.
ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ನಿರೋಕಳಿ ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರು ಹೊಂಡ ಪೂಜೆ ನೆರವೇರಿಸಿದರು.
Published on

ರಬಕವಿ/ಬನಹಟ್ಟಿ: ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ನಿರೋಕಳಿ ಅಂಗವಾಗಿ ಗ್ರಾಮದಲ್ಲಿನ ಹಿರಿಯರು ನಿರೋಕಳಿಯ ಹೊಂಡಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಗ್ರಾಮದ ಹಿರಿಯರಾದ ರಾಚಯ್ಯ ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಂಪ್ರದಾಯ ಹಾಗೂ ಸೊಗಡು ಇನ್ನು ಸ್ಪಲ್ಪ ಉಳಿದುಕೊಂಡಿದೆ. ಕೆಲವು ಗ್ರಾಮಗಳಲ್ಲಿ ಈ ಶೈಲಿಯ ಹಬ್ಬಗಳು ಮಾಯವಾಗುತ್ತಿದ್ದು, ಅವುಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ ಎಂದರು.

ಮುಖಂಡ ಶಂಕರ ಮಗದುಮ್ ಮಾತನಾಡಿ, ಗ್ರಾಮದ ಹೆಣ್ಣು ಮಕ್ಕಳು ಗಂಡನ ಮನೆಯಿಂದ ಈ ಜಾತ್ರೆ ನಿಮಿತ್ತ ಹೆಂಗಳೆಯರನ್ನೆಲ್ಲ ಕರೆದು ಮನೆಯವರೆಲ್ಲ ಸೇರಿ ಜಾತ್ರೆಯನ್ನು ಸವಿಯುವುದು ಒಂದು ಭಾಗ್ಯ. ಅನೇಕ ಒಡಕು ಮೂಡಿದ ಸಂಬಂಧಗಳು ಒಂದಾಗಲು ಜಾತ್ರೆಗಳು ಅತಿ ಮುಖ್ಯಪಾತ್ರ ವಹಿಸುತ್ತವೆ ಎಂದರು.

ಶಿವಗೌಡ ಪಾಟೀಲ, ಸೋಮನಿಂಗ ನಾಯಿಕ, ಸಂಜು ಮಾಳಗೌಡ, ಚನ್ನಪ್ಪ ಮಗದುಮ್, ವಸಂತ ಪಾಟೀಲ, ಶಂಕರ ಸಂತಿ, ಸಿದ್ದಪ್ಪ ಮದರಖಂಡಿ, ಶಿವಪ್ಪ ಮಗದುಮ, ಬಸಪ್ಪ ಸೊಡ್ಡಗಿ, ಸತ್ಯಪ್ಪ ಮನಗೂಳಿ, ಬಸಪ್ಪ ಝಳಕಿ, ಲಕ್ಷ್ಮಣ ಮಾಳಗೌಡ, ಬಾಬು ಮುದಕನ್ನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net