ಸ್ವ ಸಹಾಯ ಸಂಘಗಳ ಸಹಕಾರದಿಂದ ಗ್ರಾಮೀಣ ಅಭಿವೃದ್ಧಿ

TRAINING
Published on

ಮುಂಡರಗಿ: ಗ್ರಾಮೀಣ ಪ್ರದೇಶ ಅಭಿವೃದ್ಧಿ ಸಾಧಿಸಬೇಕಾದರೆ ಸ್ವ-ಸಹಾಯ ಸಂಘಗಳ ಸಹಕಾರ ಮತ್ತು ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ ಎಂದು ತಾ.ಪಂ. ಇಒ ವಿಶ್ವಾನಾಥ ಹೊಸಮನಿ ಹೇಳಿದರು.

ಪಟ್ಟಣದ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ಅಬ್ದುಲ್‌ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ತರಬೇತಿ ಸಂಸ್ಥೆ ಮೈಸೂರು, ಜಿ.ಪಂ.ಗದಗ, ತಾ.ಪಂ.ಮುಂಡರಗಿ ಸಹಯೋಗದಲ್ಲಿ ಪಂಚಾಯತ್‌ರಾಜ್ ಮತ್ತು ಸ್ವ-ಸಹಾಯ ಸಂಘಗಳ ಒಗ್ಗೂಡಿಸುವಿಕೆ ಕುರಿತು ಇತ್ತೀಚೆಗೆ ಜರುಗಿದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಕೇಂದ್ರೀಕೃತ ತರಬೇತಿ ಸಂಯೋಜಕ ಮಂಜುನಾಥ ಮುಧೋಳ ತರಬೇತಿ ಕುರಿತು ಮಾಹಿತಿ ನೀಡಿದರು. ಡಾ.ಅರುಂಧತಿ ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಪರ ಮುಖ್ಯಕಾರ್ಯದರ್ಶಿ ಉಮಾಮಹಾದೇವನ್ ಅವರು ತರಬೇತಿ ಆಶಯ ನುಡಿಗಳನ್ನು ಹೇಳಿದರು. ಡಾ.ಪ್ರಕಾಶ ಎಸ್.ಎಚ್. ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಪೇಠಾಲೂರ, ಜಂತ್ಲಿಶಿರೂರ, ಹಳ್ಳಿಕೇರಿ ಗ್ರಾ.ಪಂ.ಗಳ ಮೂರು ಸ್ಥಾಯಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಪಿಡಿಒ, ಒಕ್ಕೂಟದ ಪ್ರತಿನಿಧಿಗಳು, ಜಿ.ಆರ್.ಪಿ. ಲಲಿತಾ ಜೊಂಡಿ, ವಿಷಯ ನಿರ್ವಾಹಕ ಶಾಬುದ್ದಿನ್ ನದಾಫ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net