ಗ್ರಾಮಾಭಿವೃದ್ಧಿ ಯೋಜನೆ ಬಡವರಿಗೆ ಆಶಾಕಿರಣ

Upp_Rural Development
Published on

ಉಪ್ಪಿನಂಗಡಿ: ಶ್ರೀ ಕ್ಷೇತ್ರ  ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಚಾರಿಟೆಬಲ್​ ಟ್ರಸ್ಟ್​ ಮೂಲಕ ಹಲವಾರು ಜನಪರ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ನೀಡುತ್ತಿದ್ದು, ಬಡವರ ಪಾಲಿಗೆ ಆಶಾಕಿರಣವಾಗಿ ಹಲವು ಯೋಜನೆಗಳು ಕಾರ್ಯಗತಗೊಂಡಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್​ ಎಂ.ತಿಳಿಸಿದರು.

ಉಪ್ಪಿನಂಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸ್ವಸಹಾಯ ಗುಂಪುಗಳ ಮೂಲಕ ಜನರಿಗೆ ಸುಲಭವಾಗಿ ಬ್ಯಾಂಕ್​ ಸಾಲವನ್ನು ಒದಗಿಸಲಾಗುತ್ತಿದ್ದು, ಬ್ಯಾಂಕಿನವರು ವಿಧಿಸುವ ಬಡ್ಡಿಯ ಹೊರತಾಗಿ ಬೇರಾವುದೇ ಬಡ್ಡಿ ವಿಧಿಸಲಾಗುತ್ತಿಲ್ಲ. ಮಾತ್ರವಲ್ಲದೆ ಸರಳೀಕೃತ ಬಡ್ಡಿಯಾಗಿದ್ದು, ಕಂತು ಕಟ್ಟಿದ್ದಂತೆ ಬಡ್ಡಿಯೂ ಕಡಿಮೆಯಾಗುವುದರಿಂದ ಜನರ ಪಾಲಿಗೆ ಉಪಯುಕ್ತವೆನಿಸಿದೆ. ಸ್ವ ಸಹಾಯ ಸಂಗಳು ವ್ಯವಹಾರದಿಂದ ಗಳಿಸಿದ ಲಾಭಾಂಶವನ್ನೂ ಕೂಡ ಸಂಗಳಿಗೆಯೇ ಹಂಚುವ ಮೂಲಕ ಇಡೀ ಆರ್ಥಿಕ ವ್ಯವಹಾರವನ್ನು ಜನ ಸಾಮಾನ್ಯರ ಹಿತದೃಷ್ಟಿಯಿಂದ ನಡೆಸಲಾಗುತ್ತಿದೆ. ಇದಕ್ಕೆ ಸಾ ಎಂಬಂತೆ ಈ ಬಾರಿ 600 ಕೋಟಿ ರೂ. ಲಾಭಾಂಶ ಹಂಚಿಕೆಯನ್ನು ದೇಶದ ವಿತ್ತ ಸಚಿವರಿಂದಲೇ ಇತ್ತೀಚೆಗೆ ನಡೆಸಲಾಗಿದೆ ಎಂದರು.

ಯೋಜನೆಯ ಮೇಲ್ವಿಚಾರಕ ಶಿವಪ್ಪ ಎಂ.ಕೆ.ಹಾಗೂ ಉಪ್ಪಿನಂಗಡಿ ವಲಯದ ಹಲವಾರು ಸೇವಾಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net