ಉತ್ತಮ ಬದುಕು ಕಟ್ಟಿಕೊಳ್ಳಲು ಗ್ರಾಮಾಭಿವೃದ್ಧಿ ಸಂಸ್ಥೆ ನೆರವು

IMG-20241019-WA0028
ಬೇಲೂರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಂ.ಮಮತಾ, ಚಂದ್ರಶೇಖರ್, ಮಮತಾ, ಸೋಮಶೇಖರ್, ಮಂಜುನಾಥ್, ದಯಾನಂದ್ ಇದ್ದರು.
Published on

ಬೇಲೂರು: ಮಹಿಳೆಯರು ಮತ್ತು ಸಾರ್ವಜನಿಕರನ್ನು ಸ್ವಾಭಿಮಾನಿಗಳಾನ್ನಾಗಿಸಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು.

ಪಟ್ಟಣದ ಆರ್.ವಿ. ಕನ್ವೆನ್ಷನ್ ಸಭಾಂಗಣದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಒಕ್ಸಕೂಟ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಪವೃಕ್ಷದಂತೆ ನೂರಾರು ಜನರಿಗೆ ಆಸರೆ ನೀಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಟ್ಟಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯೂ ಉತ್ತಮ ಸೇವಾ ಕಾರ್ಯ ಮಾಡುತ್ತಿದೆ. ಸೇವಾ ಮಾಡುವ ಮನಸ್ಸು ಎಲ್ಲರಲ್ಲೂ ಇರುವುದಿಲ್ಲ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯೂ ಜಾತಿ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಬದುಕು ಕಟ್ಟಿಕೊಳ್ಳಲು ವೇದಿಕೆ ನಿರ್ಮಿಸಿದೆ. ಈ ಒಕ್ಕೂಟದಿಂದ ಮಹಿಳಾ ಸಂಘಗಳ ಬಲವರ್ದನೆ, ಸರ್ಕಾರದ ಸೌಲಭ್ಯ ಒದಗಿಸುವುದು, ರೈತರಿಗೆ ಬೇಕಾದ ಕೃಷಿ ಉತ್ಪನ್ನಗಳನ್ನು ನೀಡುವ ಮೂಲಕ ರೈತರನ್ನು ಉತ್ತೇಜಿಸುವುದರೊಂದಿಗೆ ಸಂಸ್ಥೆ ಸರ್ಕಾರದ ಒಂದು ಭಾಗವಾಗಿ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಮಲ್ಲೇಶಗೌಡ ಮಾತನಾಡಿ, ಶ್ರೀ ಧರ್ಮಸ್ಥಳ ಕ್ಷೇತ್ರ ಕೇವಲ ದೈವಿಕ ಭಾವನೆಗೆ ಮಾತ್ರವಲ್ಲದೆ ಸಂಸ್ಕಾರ ಕಲಿಸುವ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ವಿದ್ಯೆಗೆ ಮಾತ್ರ ಮೀಸಲಾಗುತ್ತಿದೆ ಹೊರತು ಸಂಸ್ಕಾರ ಕಲಿಸುತ್ತಿಲ್ಲ. ಸಮಾಜದಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ ಮರೆತು ಹೋಗಿರುವುದರಿಂದ ಇಂದು ಯುವಜನರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಸರ್ಕಾರ ಕೇವಲ ಆದಾಯಕ್ಕಾಗಿ ಯೋಜನೆ ಮಾಡಿದರೆ ಶ್ರೀ ಕ್ಷೇತ್ರವು ಮನುಕುಲದ ಉದ್ದಾರಕ್ಕಾಗಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾವಿರಾರು ಕುಟುಂಬಗಳಿಗೆ ದಾರಿ ದೀಪವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಚಂದ್ರಶೇಖರ್ ಮಾತನಾಡಿ, ತಾಲೂಕಿನಲ್ಲಿ 2927 ಸ್ವ-ಸಹಾಯ ಸಂಘಗಳು ಹಾಗೂ ಪ್ರಗತಿಬಂಧು ಸಂಘಗಳು ಸೇರಿ 21,646 ಸದಸ್ಯರನ್ನು ಹೊಂದಿದೆ. ಪ್ರತಿವರ್ಷ 110 ಕೋಟಿ ರೂ. ಮಾಡಲಾಗುತ್ತಿದೆ. ಕೃಷಿ ಕಾರ್ಯಕ್ರಮಗಳಿಗೆ 22 ಲಕ್ಷ ರೂ., ವಾತ್ಸಲ್ಯ, ಮಾಸಾಶನ, ನಿರ್ಗತಿಕರಿಗೆ ಮನೆ ನಿರ್ಮಾಣ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ವೇತನ, ಶ್ರದ್ಧಾ ಕೇಂದ್ರಗಳ ಅಭಿವೃದ್ಧಿ, ಹಿಂದು ರುದ್ರಭೂಮಿ, ಕೆರೆಗಳ ಪುನಶ್ಚೇತನ ಸೇರಿದಂತೆ ಹತ್ತಾರು ಯೋಜನೆಗಳನ್ನು ಪೂಜ್ಯರ ಸಲಹೆಯಂತೆ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಜಿಲ್ಲಾ ಯೋಜನಾಧಿಕಾರಿ ಮಮತಾ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಸೋಮಶೇಖರ್, ಸಮಿತಿಯ ಮಂಜುನಾಥ್, ದಯಾನಂದ್, ಆದಿತ್ಯ, ಭಾರತಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net