

ಆನೇಕಲ್ : ಜನಪ್ರತಿನಿಧಿಗಳು ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು. ಬಳ್ಳೂರು ಗ್ರಾಪಂ ವ್ಯಾಪ್ತಿಯ ಕೊಡಲಿಪುರದಲ್ಲಿ ಶುದ್ಧ ಕುಡಿಯುವ ನೀರಿನ ಟಕದ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ಬಳ್ಳೂರು ಗಡಿ ಭಾಗವಾಗಿದ್ದು, ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಗಡಿ ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ತಾಲೂಕು, ರಾಜ್ಯದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರೂ ರಾಜ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿ ಆರೋಗ್ಯ ೇತ್ರದಲ್ಲಿನ ಬದಲಾವಣೆ ತರಬೇಕು ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ತಾಲೂಕಿನಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಕೆಲವು ಕಡೆ ರಸ್ತೆಗಳು ಹಾಳಾಗಿದ್ದು, ಮಳೆ ಆಗುತ್ತಿರುವ ಹಿನ್ನೆಲೆ ಗುಂಡಿಗಳನ್ನು ಸರಿಯಾಗಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತ ತಕ್ಷಣ ರಸ್ತೆಗಳಿಗೆ ಡಾಂಬರು ಹಾಕಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುವುದು ಎಂದು ಹೇಳಿದರು. ಬಳ್ಳೂರು ಗ್ರಾಪಂ ಅಧ್ಯೆ ಮನೋದೇವಿ ಗಣೇಶ್ ಮಾತನಾಡಿ, ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಕೆಲವು ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದೆ ಎಂದರು. ಸದಸ್ಯರಾದ ಸುಪ್ರಿಯಾ, ಲಕ್ಷ$್ಮಮ್ಮ, ಮಂಜುಳಾ, ಡಿ. ಮಂಜುನಾಥ್, ಬಿ.ನಾರಾಯಣ ಸ್ವಾಮಿ, ವಿ.ವೆಂಕಟೇಶ್, ವೈ.ಮಂಜುನಾಥ್, ಹರೀಶ್ ಅರೇಹಳ್ಳಿ, ಮಾರಪ್ಪ, ಜಿಪಂ ಮಾಜಿ ಸದಸ್ಯ ನಾರಾಯಣ ಸ್ವಾಮಿ, ವಿಜಯಮ್ಮ ಮದನಗಿರಿಯಪ್ಪ, ರೂಪಾವತಿ, ಗಂಗಮ್ಮ, ಸವಿತಾ, ತಾಜುನ್ನೀಸಾ, ಲತಾ ಗಣೇಶ್, ಬಿ.ಆರ್.ಅಶೋಕ ರೆಡ್ಡಿ, ನಾರಾಯಣ ಸ್ವಾಮಿ, ಮುನಿರೆಡ್ಡಿ, ಕಿರಣ್, ವೀರಭದ್ರಪ್ಪ, ವೇಣು, ಚಂದ್ರೇಶ್, ಎಂ.ಎಂ.ಟಿ.ಮಧು ಇದ್ದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳಿಗೆ ಒತ್ತು ನೀಡಿದ್ದು, ಸರ್ಕಾರಿ ಶಾಲೆ ಮಕ್ಕಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ನೀಡುತ್ತಿದ್ದೇವೆ. > ವಸಂತ್ ರೆಡ್ಡಿ ಗ್ರಾಪಂ ಉಪಾಧ್ಯಕ್ಷ